ಸೂಕ್ತ ಭದ್ರತೆ ಇರುವ ವಿಲ್ಲಾದಲ್ಲೆ ಒಂದು ಕೊಟಿ ರೂ ಚಿನ್ನಾಭರಣ ಕಳವು

403

ಬೆಂಗಳೂರು (ಮಹದೇವಪುರ) : ಇಷ್ಟು ದಿನಗಳ ಕಾಲ ಕಳ್ಳರು ಒಂಟಿ ಮನೆಗಳು, ನಿದರ್ಿಷ್ಟ ಏರಿಯಾಗಳ, ಭದ್ರತೆ ಇಲ್ಲದ ಸ್ಥಳಗಳನ್ನು ಗುರಿಯಾಗಿಟ್ಟುಕೊಂಡು ಕಳ್ಳತನ ಮಾಡುತ್ತಿದ್ದರು. ಆದರೆ ಇದೀಗ 24*7 ಭದ್ರತೆ ವಿಲ್ಲಾಗಳ ಒಳ ನುಗ್ಗಿ ಕೋಟ್ಯಾಂತರ ರೂ ಬೆಲೆಯ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ, ಇದರಿಂದಾಗಿ ವಿಲ್ಲಾ ಹಗೂ ಅಪಾಟರ್್ಮೆಂಟ್ಗಳಲ್ಲಿ ವಾಸಿಸುವ ಜನರು ಸಹ ಕಳ್ಳರಿಗೆ ಭಯಪಡುಂತಾಗಿದೆ. ಅದೇಲ್ಲಿ ಅಂತೀರ ಈ ಸ್ಟೋರಿ.

ಇದು ಬೆಂಗಳೂರಿನ ವೈಟ್ಫೀಲ್ಡ್ ಹಗದೂರು ಸಮೀಪವಿರುವ ಚೈತನ್ಯ ಓಕ್ವಿಲ್ ಹೈಟೆಕ್ ಮನೆಗಳು. ಇಲ್ಲಿನ ಮನೆಗಳಿಗೆ ಒಂದು ಪ್ರಾಣಿಯು ನುಸಳದಷ್ಟು ಬಿಗಿ ಭದ್ರತೆ ಕಲ್ಪಿಸಿದ್ದರು ಒಳಭಾಗದ ಮನೆಯೊಂದರಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಈ ವಿಲ್ಲಾದಲ್ಲಿ ವಾಸಿಸುವ ವೆಂಕಟರಾವ್ ಎಂಬುವರ ಮನೆಯ ಮೊದಲ ಮಹಡಿಯಿಂದ ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ಒಂದು ಕೊಟಿ ರೂ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.  ಇನ್ನು ವೆಕಟರಾವ್ ಸಂಬಂದಿಕರ ಮದುವೆಯಿದ್ದ ಕಾರಣ ಭಾರಿ ಮೊತ್ತದ ಚಿನ್ನಾಭರಣವನ್ನು ಮನೆಯಲ್ಲಿ ಇರಿಸಿಕೊಂಡಿದ್ದು, ಇದನ್ನು ಅರಿತವರೆ ಈ ಕೃತ್ಯವೆಸಗಿರಬಹುದೆಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಬೇಟಿ ನೀಡಿದ  ವೈಟ್ಫಿಲ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗಾಗಿ ತನೆಖೆ ನಡೆಸುತ್ತಿದ್ದಾರೆ.
– ನಾರಾಯಣ್, ಡಿಸಿಪಿ 

ಒಟ್ಟಿನಲ್ಲಿ ವಿಲ್ಲಾಗಳಿಗೆ 24*7 ಭದ್ರತೆ ವ್ಯವಸ್ಥೆಯನ್ನು ಕಲ್ಪಿಸಿದ್ದರು, ಭದ್ರತಾ ಸಿಬ್ಬಂದಿಗಳ ಕಣ್ ತಪ್ಪಿಸಿ ಕಳ್ಳರು ಚಿನ್ನಾಭರಣವನ್ನು ಕದ್ದು ಪರಾರಿಯಾಗಿರುವುದು ಬೆಂಗಳೂರಿನ ಶ್ರೀಮಂತರಲ್ಲಿ ನಡುವನ್ನು ಉಂಟುಮಾಡಿದ್ದು, ಅದಷ್ಟು ಬೇಗನೆ ಈ ಹೈನಾತಿ ಕಳ್ಳರಿಗೆ ಪೊಲಿಸರು ಹೆಡೆಮುರಿ ಕಟ್ಟುತ್ತಾರ ಎಂಬುದನ್ನು ಕಾದುನೊಡಬೇಕಿದೆ.