ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ದೆ..

367

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ;ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಷಿಯನ್ ವತಿಯಿಂದ ಮಕ್ಕಳಿಗೆ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ದೆ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಸಿ ವಿಜೇತರಿಗೆ ಮಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿದರು.ಮಾಜಿ ಸಚಿವ ವಿ.ಮುನಿಯಪ್ಪ ಚಾಲನೆ ನೀಡಿ, ಮನುಷ್ಯ ಸದಾ ಆರೋಗ್ಯವಂತ ವ್ಯೆಕ್ತಯಾಗಲು ಕ್ರೀಡೆಗಳು ಬಹು ಮುಖ್ಯವಾಗಿದೆ ಎಂದರು. ಅಥ್ಲೇಟಿಕ್ಸಿ ಅಂತರಾಷ್ಟ್ರೀಯ ಕ್ರೀಡಾಪಟು ಜಯಚಂದ್ರ ಹಾಗೂ ರಾಜ್ಯ ಕ್ರೀಡಾಪಟು ಜಯಂತಿಗ್ರಾಮ ನಾರಾಯಣಸ್ವಾಮಿ ರವರಿಗೆ ಸನ್ಮಾನಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ನಿರ್ಮಲ ಮುನಿರಾಜು, ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜಾ ನಿರಂಜನ್, ಮಮತಮೂರ್ತಿ, ಟಿ ಟಿ. ನರಸಿಂಹಪ್ಪ, ಜೆ.ವಿ.ಸುರೇಶ್,ಡಾ..ವೆಂಕಟೇಶಮೂರ್ತಿ,ಜಭೀವುಲ್ಲಾ, ಹಾಗೂ ಮುಂತಾದವರು ಭಾಗವಹಿಸಿದ್ದರು.