ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮ…

353

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಸ್ವರಚಿತ 14 ಕೃತಿಗಳನ್ನು ಪರಿಚಯಿಸಿ ಚಿಕ್ಕಬಳ್ಳಾಪುರ ಲೇಖಕಿ ನಿವೃತ್ತ ಶಿಕ್ಷಕಿ ಎ. ಸರಸಮ್ಮ ಮಾತನಾಡಿದರು.ನಗರದ ಗ್ರಂಥಾಲಯದಲ್ಲಿ “ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮ ತಾಲ್ಲೂಕು ಕನ್ನಡ ಸಾರಸ್ವತಾ ಪಾರಿಚಾರಿಕೆ ಮತ್ತು ಕೇಂದ್ರ ಗ್ರಂಥಾಲಯ ಚಿಕ್ಕಬಳ್ಳಾಪುರ ಇವರ ವತಿಯಿಂದ ನಗರ ಗ್ರಂಥಾಲಯದಲ್ಲಿ ನಡೆಯಿತು.ಕತೆ, ಕವನ, ಚುಟುಕು ಸಾಹಿತ್ಯ, ಮಕ್ಕಳ ಸಾಹಿತ್ಯ ಹಾಗೂ ಕಾದಂಬರಿಗಳನ್ನು ಬರೆಯುವ ಮೂಲಕ ನಿರಂತರವಾಗಿ ಸಾಹಿತ್ಯ ಸೇವೆಯಲ್ಲಿ ತೊಡಗಿದ್ದು,ಕಾಮನಬಿಲ್ಲು 1-2, ಧನಗಳ ಚಿನ್ನಿ, ಅರುಣೋದಯ, ಮಾತೃದೇವೊಭವ, ಸ್ಪೂರ್ತಿ, ಮನೆ ಮಗ, ಬಾಡಿಗೆ ಮನೆ, ಮುಂತಾದವು ಸಾಮಾಜಿಕ ಕಳಕಳಿಯ ಕಾದಂಬರಿಗಳ ಬಗ್ಗೆ ಮಾತಾಡಿದರು.ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾದ್ಯಕ್ಷ ಚಲಪತಿಗೌಡ,ಕನ್ನಡ ಸಾರಸ್ವತಾ ಪರಿಚಾರಿಕೆ ತಾಲ್ಲೂಕು ಅದ್ಯಕ್ಷ ಬಿ.ಆರ್. ಅನಂತಕೃಷ್ಣ, ಕಾರ್ಯದರ್ಶಿ ತ್ಯಾಗರಾಜು, ಸುಂದರ್, ಶ್ರೀನಿವಾಸ್, ಹಾಗೂ ಮುಂತಾದವರು ಭಾಗವಹಿಸಿದ್ದರು.