ಸಹಕಾರಿಯ ಸಹಕಾರದೊಂದಿಗೆ ಅಭಿವೃದ್ಧಿ ಸಾಧಿಸಿ.

269

ಬಳ್ಳಾರಿ/ಹೊಸಪೇಟೆ:ಬಡ ಮಧ್ಯಮ ವರ್ಗದವರು ಸ್ವಾವಲಂಬಿ ಜೀವನ ನಡೆಸಲು ಅಗತ್ಯ ಆರ್ಥಿಕ ನೆರವು ನೀಡುವ ಮೂಲಕ ಸಹಕಾರಿ ರಂಗ ಸಾಕಷ್ಟು ಜನರಿಗೆ ಸಹಕಾರಿಯಾಗಿದೆ ಎಂದು ಸಹಕಾರ ಸಚಿವ ರಮೇಶ ಜಾರಕಿಹೊಳಿ ಹೇಳಿದರು.ನಗರದ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಭಾನುವಾರ ಜರುಗಿದ ದಿ.ಹೊಸಪೇಟೆ ಕೋ-ಆಪರೇಟಿವ್ ಸಿಟಿ ಬ್ಯಾಂಕ್ ನಿಯಮಿತದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರಿ ತತ್ವಗಳ ಸಂಪೂರ್ಣವಾಗಿ ಅರ್ಥವಾಗಿಸಿಕೊಂಡು ಅನುಷ್ಠಾನಗೊಳಿಸಿಕೊಂಡು ನಡೆದಲ್ಲಿ ಸಹಕಾರಿಗಳು ಸಾಧನೆಯತ್ತ ಸಾಗುತ್ತವೆ. ಸಹಕಾರಿ ಕಾಯ್ದೆ ಜಾರಿಯಾದಾಗಿನಿಂದ ಗ್ರಾಮೀಣ ಪ್ರದೇಶಗಳಲ್ಲಿ ಹಣಕಾಸಿನ ವಿಸ್ತರಣೆಗೆ ನಾಂದಿ ಹಾಡಲಾಯಿತು. ಸಮಾಜದ ಯಾವೊಂದು ವರ್ಗವು ಹಣಕಾಸು ಸೇವಾ ಸೌಲಭ್ಯದಿಂದ ವಂಚಿತವಾಗದಂತೆ ಸಹಕಾರಿಗಳು ಗಮನ ಹರಿಸಬೇಕು. ಅಭಿವೃದ್ಧಿ ಸಾಧಿಸಲು ಸಹಕಾರ ಕ್ಷೇತ್ರಕ್ಕಿಂತ ಪರ್ಯಾಯ ಕ್ಷೇತ್ರ ಇನ್ನೊಂದಿಲ್ಲ. ಜನರ ಅರ್ಥಿಕ ಪ್ರಗತಿಯತ್ತ ಸಹಕಾರಿ ರಂಗ ಸದಾ ಶ್ರಮಿಸುತ್ತಿದೆ. ಸಹಕಾರಿಯ ಪ್ರಯೋಜನ ಪಡೆಯಬೇಕು. ನೂರರ ಸಂಭ್ರಮ ಆಚರಿಸಿಕಳ್ಳುತ್ತಿರುವ ಸಿಟಿ ಬ್ಯಾಂಕಿನ ಸಾಧನೆ ಬಹುದೊಡ್ಡದು. ಬ್ಯಾಂಕಿನ ಶತಕ ಸಾರ್ಥಕ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಗ್ರಾಹಕರ ವಿಶ್ವಾಸಕ್ಕೆ ಮತ್ತಷ್ಟು ಹತ್ತಿರವಾಗಲಿ ಎಂದರು.

ಶಾಸಕ ಆನಂದಸಿಂಗ್ ಮಾತನಾಡಿ, ನೂರರ ಗಡಿ ದಾಟಿರುವ ಸಿಟಿ ಬ್ಯಾಂಕಿನ ಹಿಂದೆ ಅನೇಕರ ಶ್ರಮವಿದೆ. ಗ್ರಾಹಕರ, ಸದಸ್ಯರ ಸಹಕಾರದಿಂದ ಹಾಗೂ ಸೇವಾ ಮನೋಭಾವ ರೂಢಿಸಿಕೊಂಡಿರುವುದರಿಂದ ಸಿಟಿ ಬ್ಯಾಂಕ್ ನೂರರ ಸಂಭ್ರಮದಲ್ಲಿರುವುದು ಗ್ರಾಹಕರ ಸೌಭಾಗ್ಯವೂ ಆಗಿದೆ. ಕೆಲ ಬ್ಯಾಂಕ್‍ಗಳು ಗ್ರಾಹಕರ ವಿಶ್ವಾಸ ಪಡೆಯುವಷ್ಠರೊಳಗೆ ಇಲ್ಲದಂತಾಗಿವೆ. ಇನ್ನೂ ಕೆಲವು ಗ್ರಾಹಕರಿಗೆ ಆಮೀಷುಗಳನ್ನು ತೋರಿಸಿ ಹಣ ಸಂಗ್ರಹಿಸಿ ರಾತ್ರೋ ರಾತ್ರಿ ಕಾಲ್ಕೀಳುತ್ತವೆ. ಗ್ರಾಹಕರು ವಿಶ್ವಾಸರ್ಹತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರ ಎತ್ತರೆತ್ತರಕ್ಕೆ ಬೆಳೆಯಬೇಕು ಎಂದರು.ಸಂಸದ ಶ್ರೀರಾಮುಲು ಮಾತನಾಡಿ, ಸಹಕಾರ ಕ್ಷೇತ್ರ ಸಾಮರಸ್ಯ, ಸೌಹರ್ದತೆ ಕಾಪಾಡಿಕೊಂಡು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಗ್ರಾಮೀಣ ಜನರಿಗೆ ಆರ್ಥಿಕ ನೆರವು ನೀಡುವ ಮೂಲಕ ಸ್ವಾವಲಂಬಿಗಳನ್ನಾಗಿಸುತ್ತಿದೆ. ನಿರುದ್ಯೋಗವನ್ನು ಹೋಗಲಾಡಿಸುವಲ್ಲಿಯು ತನ್ನದೆ ಆದ ಕೊಡುಗೆ ನೀಡಿದೆ. ಸ್ಪರ್ಧಾತ್ಮಕ ಯುಗದಲ್ಲಿ ಅತ್ಯುತ್ತಮ ಆಡಳಿತ ಸೂತ್ರ ಹಾಗೂ ಸಹಕಾರ ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆದಾಗ ಅಭ್ಯುದಯ ಕಾಣಬಹುದು ಎಂದರು.ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಸಾಧಿಸಿದ್ದಕ್ಕಿಂತ ಸಾಧಿಸುವುದು ಸಾಕಷ್ಟಿದೆ. ನಾಯಕತ್ವದ ಕೊರತೆಯಿಂದಾಗಿ ಅನೇಕ ಸಹಕಾರಿಗಳು ಹಿನ್ನಡೆ ಅನುಭವಿಸಿ ಕಣ್ಮರೆಯಾಗುತ್ತಿವೆ. ಸಹಕಾರಿ ಬ್ಯಾಂಕ್‍ಗಳು ರಾಷ್ಟ್ರೀಯ ಬ್ಯಾಂಕಿಗಳಿಗೂ ಮಿಗಿಲಾದ ಸೇವಾ ಸೌಲಭ್ಯವನ್ನು ನೀಡಬಹುದಾಗಿದೆ. ಬ್ಯಾಂಕಿನಲ್ಲಿ ಸಾಲ ಸೌಲಭ್ಯ ನೀಡಲಿರುವ ನಿಯಮಗಳು ಇನ್ನಷ್ಟು ಸರಳಗೊಳ್ಳಬೇಕು. ಸಹಕಾರಿ ಬ್ಯಾಂಕ್‍ಗಳ ಮತ್ತಷ್ಟು ಹೆಚ್ಚಾದಾಗ ಸಹಕಾರಿಯ ಉದ್ದೇಶ ಸಫಲವಾಗುತ್ತದೆ ಎಂದರು.ಕೊಟ್ಟೂರುಸ್ವಾಮಿ ಮಠದ ಡಾ.ಸಂಗನಬಸವ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಸಿಟಿಬ್ಯಾಂಕಿನ ಅಧ್ಯ್ಕಷ ಎ.ಎಮ್.ಶ್ರೀನಿವಾಸ ಅಧ್ಯಕ್ಷತೆವಹಿಸಿದ್ದರು. ಸಮಾರಂಭದಲ್ಲಿ ಗಣ್ಯರು ಸ್ಮರಣ ಸಂಚಿಕೆ, ಶತಮಾನೋತ್ಸವ ನೆನಪಿನ ಕಾಣಿಗೆ ಬಿಡುಗಡೆಗೊಳಿಸಿದರು. ಶಾಸಕ ಆನಂದಸಿಂಗ್ ಶತಮಾನೋತ್ಸವ ಸ್ಮರಣಫಲಕ ಅನಾವರಣಗೊಳಿಸಿದರು.

ನಗರಸಭೆ ಅಧ್ಯಕ್ಷೆ ನಾಗಲಕ್ಷ್ಮಮ್ಮ, ಸಹಕಾರ ಸಂಘಗಳ ಉಪನಿಬಂಧಕ ತಿಪ್ಪೇಸ್ವಾಮಿ, ಸಹಾಯಕ ನಿಬಂಧಕ ಲಿಯಾಖತ್ ಅಲಿ, ಸಿಟಿ ಬ್ಯಾಂಕಿನ ನಿರ್ದೇಶಕರಾದ ಬಂಡೆ ರಂಗಪ್ಪ, ಜಿ.ಸೂರಪ್ಪ, ಗುಂಡಿ ಪ್ರಶಾಂತ, ಬಂದಿಸ್ವಾಮಿ, ನೇತ್ರಾವತಿ ಎಸ್.ಗೋಸಿ, ಎನ್.ಚಿರಂಜೀವಿ, ಡಿ.ಮಹಾಬಲೇಶ್ವರಯ್ಯ, ಜಿ.ಫಜಲ್ ಅಲಿ, ಡಿ.ಕನಕಾಚಲ, ಎನ್.ಪುಂಡಲೀಕ ಪ್ರಭು, ಟಿ.ಎಸ್.ಶೀಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಿರ್ದೇಶಕ ಗೋಸಲ ಭರಮಪ್ಪ ಸ್ವಾಗತಿಸಿದರು. ಸಿಇಒ ಸಿ.ಪ್ರಮೋದಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಶ್ಮ ನಿರ್ವಹಿಸಿದರು.ಇದೇ ಸಂದರ್ಭದಲ್ಲಿ ಬ್ಯಾಂಕಿಗೆ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರಿಗೆ ಹಾಗೂ ವ್ಯವಸ್ಥಾಪಕರನ್ನು ಸನ್ಮಾನಿಸಲಾಯಿತು. ಸಮಾರಂಭಕ್ಕೂ ಮುನ್ನ ಸಾಂಸ್ಕತಿಕ ಕಾರ್ಯಕ್ರಮಗಳು ಮತ್ತು ವಿವಿಧ ಕಲಾ ತಂಡಗಳಿಂದ ಪ್ರಮುಖ ರಸ್ತೆಯ ಲ್ಲಿ ಮೆರವಣಿಗೆಯ ನೆಡೆಯಿತು