ವಚನಕಾರರು ತಮ್ಮ ವಚನ ಸಾಹಿತ್ಯದಲ್ಲಿ ವೀರಶೈವ ಪದ ಬಳಕೆ ಮಾಡಿದ್ದಾರೆ…

418

ಬಳ್ಳಾರಿ/ಬಳ್ಳಾರಿ:ಬಸವಣ್ಣನವರು ಹಾಗೂ ವಚನಕಾರರು ತಮ್ಮ ವಚನ ಸಾಹಿತ್ಯದಲ್ಲಿ ವೀರಶೈವ ಪದ ಬಳಕೆ ಮಾಡಿದ್ದಾರೆ. ಈ ಕುರಿತ ದಾಖಲೆಯನ್ನು ಈಗಾಗಲೇ ಸಂಗ್ರಹಿಸಲಾಗುತ್ತಿದೆ ಎಂದು ಉಜ್ಜೈನಿಯ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ, ಬಳ್ಳಾರಿ ಜಿಲ್ಲೆಯ ಉಜ್ಜೈನಿಯಲ್ಲಿ ಮಾತನಾಡಿದ ಶ್ರೀಗಳು, ಲಿಂಗಾಯತ ಸ್ವತಂತ್ರ ಧರ್ಮದ ಕುರಿತ ಹೋರಾಟ ಹಾಗೂ ಇದರ ಹಿಂದಿರುವ ಉದ್ದೇಶ ಏನೆಂದು ಈಗಾಗಲೇ ಸಮಾಜದವರಿಗೆ ತಿಳಿದಿದೆ. ವೀರಶೈವ ಮಹಾಸಭಾದ ನಿಲುವು ಸ್ಪಷ್ಟವಾಗಿದೆ, ಮಾಡುವುದಾದರೇ ವೀರಶೈವ ಲಿಂಗಾಯತ ಎಂದೇ ಮಾಡಬೇಕು. ಎರಡು ಸಾವಿರಕ್ಕೂ ಹೆಚ್ಚು ಸ್ವಾಮಿಗಳ ನಿಲುವು ಕೂಡಾ ವೀರಶೈವ ಲಿಂಗಾಯತ ಪರವಾಗಿಯೇ ಇದೆ. ಕೇವಲ ಬೆರಳೆಣಿಕೆಯಷ್ಟು ಸ್ವಾಮಿಗಳು ಇದರ ವಿರುದ್ಧವಾಗಿದ್ದಾರೆ. ಗದಗದಲ್ಲಿ ಡಿಸೆಂಬರ್ ನಲ್ಲಿ ಬೃಹತ್‌ ಸಮಾವೇಶ ಮಾಡಲಾಗುವುದು. ನಮ್ಮ ಉದ್ದೇಶ ಸಮಾಜದ ಏಳಿಗೆಯೇ ಹೊರತು ಇಬ್ಭಾಗವಲ್ಲವೆಂದು ಹೇಳಿದ್ದಾರೆ,

 

ಬೈಟ್, ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ( ಉಜ್ಜೈನಿ ಪೀಠ )