ಕ್ರಿಕೆಟ್ ಟೂರ್ನ್ ಮೆಂಟ್ ಗೆ ಚಾಲನೆ..

299

ಬಳ್ಳಾರಿ/ಹೊಸಪೇಟೆ:ಸ್ಥಳೀಯ ತಾಲೂಕು ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾಗಿರುವ ರಾಜ್ಯ ಮಟ್ಟದ ಪ್ರೆಂಡ್ ಶಿಫ್ ಕಪ್ ಕ್ರಿಕೆಟ್ ಟೂರ್ನ್ ಮೆಂಟ್ ಗೆ ಚಾಲನೆ ನೀಡಲಾಯಿತು.ತಾಲೂಕು ಕ್ರೀಡಾಂಗಣದಲ್ಲಿ ಸ್ಥಳೀಯ ಹೊಸಪೇಟೆ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಲಾಗಿರುವ ಕ್ರಿಕೆಟ್ ಪಂದ್ಯಾವಳಿಗೆ,  ಸ್ಥಳೀಯ ಕಾಂಗ್ರಸ್ ಮುಖಂಡ ಹಾಗೂ ಹೊಸಪೇಟೆ ಕ್ರಿಕೆಟ್ ಕ್ಲಬ್ ಅಧ್ಯಕ್ಷ ದೀಪಕ್ ಕುಮಾರ್ ಸಿಂಗ್, ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಇಂದಿನ ಯುವ ಜನತೆ, ಮೊಬೈಲ್ ಮತ್ತು ಕಂಪ್ಯೂಟರ್ ಗಳಿಗೆ ಮೊರೆ ಹೋಗುತ್ತಿರುವುದರಿಂದ ಕ್ರೀಡೆಗಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ದೈಹಿಕ ಆರೋಗ್ಯದ ದೃಷ್ಟಿಯಿಂದ ಯುವಜನತೆ ಕ್ರೀಡೆಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಸ್ಥಳೀಯ ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನ ನೀಡುವ ದೃಷ್ಟಿಯಿಂದ ಮತ್ತು ಹೊಸಪೇಟೆ ಕ್ರಿಕೆಟ್ ಕ್ಲಬ್ ಗೆ 20 ವರ್ಷಗಳು ತುಂಬಿರುವ ಹಿನ್ನಲೆಯಲ್ಲಿ ರಾಜ್ಯ ಮಟ್ಟದ ಪ್ರೆಂಡ್ ಶಿಫ್ ಕಪ್ ಕ್ರಿಕೆಟ್ ಟೂರ್ನ್ ಮೆಂಟ್ ಆಯೋಜಿಸಲಾಗಿದೆ ಎಂದರು.ಉದ್ಘಾಟನಾ ಸಮಾರಂಭದಲ್ಲಿ ಟಯೋಟಾ ಶೋ ರೂಂ ಮಾಲೀಕ ಶ್ಯಾಮ್ ಸಿಂಗ್, ಟಿವಿಎಸ್ ಶೋ ರೂಂ ಮಾಲೀಕರಾದ ಸಿಂತು ಸುಖೇಶ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ರೋಹಿಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ವೆಂಕಟರಮಣ, ಹೊಸಪೇಟೆ ಕ್ರಿಕೆಟ್ ಕ್ಲಬ್ ಉಪಾಧ್ಯಕ್ಷ ಸಂಜು ಸಿಂಗ್, ಮುಖಂಡರಾದ ಲಿಯಾಕತ್ ಅಲಿ, ರಾಮಚಂದ್ರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.ಇಂದಿನಿಂದ ನ.28 ರ ವರೆಗೆ ಜರುಗಲಿರುವ ಕ್ರಿಕೆಟ್ ಟೂರ್ನ್ ಮೆಂಟ್ ನಲ್ಲಿ ಹೊಸಪೇಟೆ, ಬಳ್ಳಾರಿ, ಕೊಪ್ಪಳ, ಸಂಡೂರು, ಹರಿಹರ, ಗಜೇಂದ್ರಗಢ, ಗುಂತಕಲ್, ಬೆಂಗಳೂರು, ಹುಬ್ಬಳ್ಳಿ, ಹೆಚ್.ಬಿ.ಹಳ್ಳಿ, ಕುಡುತಿನಿ, ದಾವಣಗೇರೆ, ಮುನಿರಾಬಾದ್ ಸೇರಿದಂತೆ ಒಟ್ಟು 16 ತಂಡಗಳು ಭಾಗವಹಿಸಲಿವೆ. ಎ ಮತ್ತು ಬಿ ಗುಂಪುಗಳಾಗಿ ವಿಭಾಗಿಸಲಾಗಿದ್ದು. ಒಂದೊಂದು ಗುಂಪಿನಲ್ಲಿ 8 ತಂಡಗಳು ಇವೆ. ಕ್ರಿಕೆಟ್ ಟೂರ್ನ್ ಮೆಂಟ್ ನ ಫೈನಲ್ ಪಂಧ್ಯ ನ.28 ರಂದು ಜರುಗಲಿದೆ.