ಬಿಸಿಲಿನಲ್ಲಿ ಸುರಿದ ಮಳೆ…

334

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ನಗರದಲ್ಲಿ ಅಪರೂಪಕ್ಕೆ ಬಿಸಿಲಿನಲ್ಲಿ ಸುರಿದ ಮಳೆ. ಮೋಡ ಕವಿದ ವಾತಾವರಣದಲ್ಲಿ ಮೋಡಗಳು ಸೂರ್ಯನನ್ನು ಆವರಿಸಿ ಸೂರ್ಯನ ಬಿಸಿಲು ಇಲ್ಲದಂತ ಸ್ಥಿತಿಯಲ್ಲಿ ಮಳೆಯು ಸುರಿಯುವುದು ವಾಡಕೆ ಆದರೆ ಬಹು ದಿನಗಳ ನಂತರ ಬಿಸಿಲಿನಲ್ಲಿ ಮಳೆ ಸುರಿದಿದೆ.ಈರೀತಿ ಮಳೆ ಸುರಿಯುವಾಗ ಹಳ್ಳಿಗಳಲ್ಲಿ ಮಕ್ಕಳು ಆಟಾಡುತ್ತಾ ಕೋಳಿ,ನರಿಗಳಿಗೆ ಬಂಡೆಗಳ ಮೇಲೆ  ಮದುವೆ ಆಗುತ್ತಿರುತ್ತಂತೆ ಎನ್ನುತ್ತಿದ್ದ ವಾಡಕೆಯು ಸಹ ಇದೆ. ಬಿಸಿಲಿನಲ್ಲಿ ಬೀಳುತ್ತಿದ್ದ ಮಳೆಯ ಹನಿಗಳು ಮುತ್ತಿನ ಹನಿಗಳಂತೆ, ಮುತ್ತಿನ ಮಣಿಗಳಂತೆ, ಮುತ್ತಿನ ಸರದಂತೆ ನೀರಿನ ಹನಿಗಳು ಸುರಿಯುತ್ತಿರುವ ಅಪರೂಪದ ದೃಶ್ಯ ಕಾಣುವಂತಾಯಿತು..