ಅಭಿನಂದನಾ ಕಾರ್ಯಕ್ರಮ…

426

ಚಿಕ್ಕಬಳ್ಳಾಪುರ/ಚಿಂತಾಮಣಿ:83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯುವ ಕವಿ ಗೋಷ್ಠಿಗೆ ಆಯ್ಕೆಗೊಂಡಿರುವ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಪ್ರಸಿದ್ಧ ಭಾಷಣಕಾರ ಡಾ.ಎಂ.ಎನ್ ರಘುರವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಅಶ್ವಿನಿ ಬಡಾವಣೆಯಲ್ಲಿ ಅಭಿನಂದನಾ ಕಾರ್ಯಕ್ರಮ.ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೈವಾರ ಎನ್ ಶ್ರೀ ನಿವಾಸ ಮಾತನಾಡಿ ಒಳ್ಳೆಯ ಜ್ಞಾನ ಮತ್ತು ವಿಷಯ ಪರಿಣಿತಿಯು ಜೀವನದಲ್ಲಿ ಉತ್ತಮ ಸಾಧನೆಗಳಿಗೆ ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಡಾ.ಎಂ.ಎನ್ ರಘು,ಪ್ರಾಂಶುಪಾಲ ಪ್ರೊ.ವಿ.ರಾಮಕೃಷ್ಣಪ್ಪ,ಪ್ರೊ.ವಿ. ಸಣ್ಣೀರಯ್ಯ, ಕಾಗತಿ ವೆಂಕಟರತ್ನಂ ,ಮಂಜುನಾಥ ,ಸಿದ್ದಪ್ಪ ,ವೆಂಕಟೇಶ್ , ನಂಜುಂಡಪ್ಪ ,ಡಾ ಸಿ.ಎಂ ದಿನೇಶ್ ,ಶ್ರೀಮತಿ ಎಸ್.ಅರ್ಚನ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.