ಕ್ಯಾಟ್ ಫಿಶ್ ಹೊಂಡಗಳ ಮೇಲೆ ಕಂದಾಯ ಅಧಿಕಾರಿಗ ದಾಳಿ

403

ಬೆಂಗಳೂರು: ಕ್ಯಾಟ್ ಫಿಶ್ ಸಾಕಾಣೆಯಿಂದ ಸುತ್ತಮುತ್ತಲ ಪರಿಸರಕ್ಕೆ ಹಾನಿಯಾಗುತ್ತದೆಂಬ ದೃಷ್ಠಿಯಿಂದ ರಾಜ್ಯ ಸರ್ಕಾರ ಇದಕ್ಕೆ ನಿಷೇದ ಏರಿದ್ದರು ಸಹ ಬೆಂಗಳೂರು ಗ್ರಾಮಾಂತರ ಹೊಸಕೊಟೆ ತಾಲೂಕಿನ ನಂದಗುಡಿಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕ್ಯಾಟ್ ಫಿಶ್ ಹೊಂಡಗಳ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ  ದಾಲಿ ನಡೆಸಿದ್ದಾರೆ. ಹೀಗೆ ಅಕ್ರಮವಾಗಿ ನಿರ್ಮಿಸಿರುವ ಕ್ಯಾಟ್ ಫಿಶ್ ಹೊಂಡಗಳನ್ನು ಅಧಿಕಾರಿಗಳು ನಾಶಪಡಿಸುತ್ತಿರುವ ದೃಶ್ಯಗಳು ಕಂಡುಬಂದದ್ದು ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ನಂದಗುಡಿ ಭಾಗದಲ್ಲಿ.

ಕ್ಯಾಟ್ ಫಿಶ್ ಸಾಕಾಣಿಕೆ ಮಾಡಬಾರದೆಂದು ಸರ್ಕಾರ ನಿಷೇದ ಹೇರಿದ್ದರು ಹಸ ಈ ಭಾಗದಲ್ಲಿ ಅಕ್ರಮವಾಗಿ ಕ್ಯಾಟ್ ಫೀಶ್ ದಂದೆ ಹೆಚ್ಚಾಗಿ ನಡೆಯುತ್ತಿದ್ದರಿಂದ ಇಂದು ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ಎಸಿ ಜಗದೀಶ್ ಹಾಗೂ ಕಾಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಹೊಂಡಗಳನ್ನು ನಾಶಪಡಿಸಿದ್ದಾರೆ.  ಇನ್ನು ಕ್ಯಾಟ್ ಫೀಶ್‍ಗಳಿಗೆ ಆಹಾರವಾಗಿ ಕೋಳಿ ಮಾಂಸ ಸೇರಿದಂತೆ, ತ್ಯಾಜ್ಯಾ ಪದಾರ್ಥಗಳನ್ನು ಬಳಸುವುದರಿಂದ ಸುತ್ತಮುತ್ತಲ ಪ್ರದೇಶಕ್ಕೆ ಹಾನಿಯಾಗುವುದರಿಂದ ಇದನ್ನು ನಿಷೇಧ ಮಾಡಿದ್ದರು ಸಹ ಬೆಂಗಳೂರು ಗ್ರಾಮಾಂತರ ಹೊಸಕೊಟೆ ತಾಲೂಕಿನ ನಂದಗುಡಿಯ ಬೈಲನರಸಾಪುರ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಅಕ್ರಮವಾಗಿ ಈ ದಂದೆಯನ್ನು ನಡೆಸುತ್ತಿದ್ದರು. ಈ ಹಿಂದೆಯು ಹಲವು ಭಾರಿ ಇಲ್ಲಿನ ಹೊಂಡಗಳನ್ನು ನಾಶಪಡಿಸಿದ್ದರು ಮತ್ತೆ ಸ್ಥಳಿಯರು ಈ ದಂದೆಗೆ ಮುಂದಾಗಿದ್ದರಿಂದ ಇಂದು ಅಧಿಕಾರಿಗಳು ದಾಳಿ ನಡೆಸಿ ಎಲ್ಲಾ ಮಾಲೀಕರ ಮೇಲೂ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.  ಒಟ್ಟಿನಲ್ಲಿ ಜನರ ಜೀವಕ್ಕೆ ಮಾರಕವಾಗಿರುವ ಕ್ಯಾಟ್ ಫಿಶ್ ದಂದೆಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಿದ್ದು ಸ್ವಾಗತಾರ್ಹವಾಗಿದ್ದು, ರಾಜ್ಯದೆಲ್ಲೆಡೆ ನಡೆಯುತ್ತಿರುವ ಕ್ಯಾಟ್ ಫೀಶ್ ದಂದೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಲಿ.