ಪಡಕೋಣೆ ವಿರುದ್ಧ ಹೇಳಿಕೆ ನೀಡಿರುವವರ ವಿರುದ್ದ ಕ್ರಮಕೈಗೊಳ್ಳುವಂತೆ ಪ್ರತಿಭಟನೆ..

197

ಮಂಡ್ಯ/ಮಳವಳ್ಳಿ:ದೀಪಿಕಾ ಪಡಕೋಣೆ ವಿರುದ್ದ ಅವಹೇಳನ ಹೇಳಿಕೆ ನೀಡಿರುವವರ ವಿರುದ್ದಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಅಖಿಲ ಭಾರತ ಜನವಾದಿಮಹಿಳಾ ಸಂಘಟನೆ ಮಳವಳ್ಳಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಎದುರು ಹರಿಯಾಣ ಬಿಜೆಪಿ ಸರ್ಕಾರ ವಿರುದ್ದ ಘೋಷಣೆ ಕೂಗಿದರು ನಂತರ ಜನವಾದಿ ಮಹಿಳಾ ಸಂಘಟನೆ ಸುಶೀಲ ಮಾತನಾಡಿ ದೀಪಿಕಾ ಪಡುಕೋಣೆ ಯವರ ತಲೆ ಕಡಿದವರಿಗೆ ಹತ್ತು ಕೋಟಿ ಸುಪಾರಿ ನೀಡುತ್ತೆನೆಂದು ಬಿಜೆಪಿ ಅದ್ಯಕ್ಷರ ಮೇಲೆ ಕಾನೂನು ಕ್ರಮಕ್ಕೆ ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸುತ್ತವೆ

ಪದ್ಮಾವತಿ ಚಿತ್ರದ ನಟಿ ದೀಪಿಕಾ ಪಡುಕೋಣೆ ನಿರ್ದೇಶಕ ಸಂಜಯಲೀಲಾ ಬನ್ಸಾಲಿ ಇವರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮತೀಯ ಶಕ್ತಿಗಳು ಕ್ರೂರವಾಗಿ ಧಾಳಿ ಮಾಡುತ್ತಿರುವುದನ್ನು ಮತ್ತು ಹತ್ಯೆಗೆ ಸುಪಾರಿ ಕೊಡುತ್ತಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ದೀಪಿಕಾ ಕೊಲೆಗೈದವರಿಗೆ ಕೋಟಿಗಟ್ಟಲೆ ಹಣ ಕೊಡುವುದಾಗಿ ಮತೀಯ ಸಂಘಟನೆಗಳು ಕೊಟ್ಟ ಹೇಳಿಕೆಯನ್ನು ಉತ್ತರ ಪ್ರದೇಶದ ಮುಖ್ಯ ಮಂತ್ರಿ ಆದಿತ್ಯನಾಥ ಯೋಗಿ ಸಮರ್ಥಿಸಿದ ಸುದ್ದಿ ಮಾದ್ಯಮದಲ್ಲಿ ವರದಿಯಾಗಿದೆ. ಇದು ಕೊಲೆಗೆ ಪ್ರಚೋದನೆ ಕೊಡುವ ಕ್ರಮವಾಗಿದ್ದು ಇವರ ಮೇಲೆ ಕಾನೂನುಕ್ರಮ ಕೈಗೊಂಡು ಜೈಲಿಗಟ್ಟಬೇಕು. ರಾಷ್ಟ್ರಪತಿಗಳು ಕೂಡಲೇ ಇಂತಹ ಕ್ರಮಕೈಗೊಳ್ಳುವ ಮೂಲಕ ದೇಶದ ಘನತೆಗೆ ಚ್ಯುತಿ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಭಾಯಿಸಬೇಕೆಂದು ಆಗ್ರಹಿಸುತ್ತೇವೆ. ಹಾಗೆಯೇ ಹರಿಯಾಣದ ಬಿಜೆಪಿ ಅಧ್ಯಕ್ಷ ಸೂರಜ್ ಪಾಲ ದೀಪಿಕಾ ಹತ್ಯೆಗೆ ಹತ್ತು ಕೋಟಿ ಘೋಷಿಸಿದ್ದು ಇದೊಂದು ಬಹಿರಂಗ ಭಯೋತ್ಪಾದನೆ ಮತ್ತು ಕೊಲೆಗಡುಕ ಸಂಸ್ಕೃತಿಯಾಗಿದೆ. ಕೂಡಲೇ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಹಾಗೂ ಬಿಜೆಪಿಯು ಇವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಇಲ್ಲದೆ ಹೋದರೆ ಬಿಜೆಪಿಯೇ ಸ್ವತಃ ಇಂತಹ ಭಯೋತ್ಪಾದನೆಗೆ ಪ್ರಚೋದಿಸುವುದು ಎಂಬುದು ಸಾಬೂತಾದಂತೆ. ಆಗ ಭಾರತದಂತಹ ಪ್ರಜಾಪ್ರಭುತ್ವ ನಾಡಿನಲ್ಲಿ ಇಂತಹ ಭಯೋತ್ಪಾದಕ ಪಕ್ಷದ ವಿರುದ್ಧವೇ ಜನತೆ ಹೋರಾಟಕ್ಕಿಳಿಯುವುದು ಅನಿವಾರ್ಯ ವಾಗುತ್ತದೆ. ಎಂದರು. ಭಾರತವು ಬಹುಸಾಂಸ್ಕೃತಿಕ ಪರಂಪರೆಯ ನಾಡಾಗಿದೆ. ಇದನ್ನು ಹಾಳುಗೆಡಹುವ ದುಷ್ಟ ಶಕ್ತಿಗಳೇ ದೀಪಿಕಾ ಮತ್ತು ಸಂಜಯ ಲೀಲಾ ಬನ್ಸಾಲಿ ವಿರುದ್ಧ ಹುಯಿಲೆಬ್ಬಿಸುತ್ತಿದ್ದಾರೆ. ಇಂತಹ ಸಂವಿಧಾನ ವಿರೋಧಿ ನಡೆಯನ್ನು ದೇಶದ ಪ್ರಜ್ಞಾಂತರು ಖಂಡಿತ ಒಪ್ಪುವುದಿಲ್ಲ. ಈಗಾಗಲೇ ಸುಪ್ರಿಂ ಕೋರ್ಟ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದೆ. ಆದರೆ ಬಿಜೆಪಿ ಮತ್ತದರ ಸಂಘ ಪರಿವಾರದ ತುಣುಕುಗಳೆಲ್ಲವೂ ಹತ್ಯಾ ಸಂಸ್ಕೃತಿಯನ್ನು ಬಹಿರಂಗವಾಗಿಯೇ ಪ್ರಚೋದಿಸುತ್ತಿವೆ.ಇವರುಗಳ ನಿಜ ಬಣ್ಣ ಇದುವೇ ಆಗಿದೆ. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ತೀವ್ರವಾಗಿ ಖಂಡಿಸುವುದು. ಮತ್ತು ಮತೀಯ ಶಕ್ತಿಗಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿದರು.ಪತ್ರಿಭಟನೆಯಲ್ಲಿ ಜನವಾದಿ ಮಹಿಳೆ ಸಂಘಟನೆ ಜಿಲ್ಲಾ ಅದ್ಯಕ್ಷರಾದ ದೇವಿ.ಕಾರ್ಯದರ್ಶಿ. ಸುನೀತಾ. ಮಂಜುಳ ಸುಶೀಲ ಜಯಶೀಲ ಬೃಂದ ಪ್ರಾಂತ ರೈತ ಸಂಘದ ಎನ್ ಎಲ್ ಭರತ್ ರಾಜ್ ಜಿ.ರಾಮಕೃಷ್ಣ. ಪುಟ್ಟಮಾದು ತಿಮ್ಮೇಗೌಡ ಬಸವರಾಜ್ ಅನಂದ್ ಕೃಷ್ಣೇಗೌಡ ಗುರುಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು