ನೀರಿಲ್ಲದ ಬಾವಿಯಲ್ಲಿ ಅಪರಚಿತ ಶವ

397

ಚಿಂತಾಮಣಿ: ತಾಲೂಕಿನ ಕುರುಟಹಳ್ಳಿ ನಾರಾ ಯಣಸ್ವಾಮಿಗೆ ಸೇರಿದ ನೀರಿಲ್ಲ ಕಲ್ಲುಕಟ್ಟಡದ ಹಾಳು ಬಾವಿಯಲ್ಲಿ ಅಪರಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಜಮೀನಿನ ಮಾಲೀಕ ನಾರಾಯಣಸ್ವಾಮಿ ಗುರುವಾರ ಮಧ್ಯಾಹ್ನ ತಮ್ಮ ತೋಟದ ಕಡೆ ಹೋದಾಗ ಕೊಳೆತ ವಾಸನೆ ಬಂದು ಬಾವಿಯತ್ತ ನೋಡಿದಾಗ ಬಾವಿಯಲ್ಲಿ ಕೊಳೆತ ಶವ ಕಾಣಿಸಿಕೊಂಡಿದ್ದು ಕೂಡಲೇ ಗ್ರಾಮಾಂತರ ಠಾಣೆ ಪೊಲೀಸರು ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದ ಕೂಡಲೇ ಗ್ರಾಮಾಂತರ ಠಾನೆ ಪಿಎಸ್‍ಐ ಲಿಯಾಖರ್ ಸ್ಥಳಕ್ಕೆ ಬೇಟಿ ನೀಡಿ ಮಹಜರು ನಡೆಸಿದ ನಂತರ ಶವವನ್ನು ಕ್ರೇನ್ ಮೂಲಕ ಎತ್ತಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದು ತೋಟದ ಮಾಲೀಕ ನಾರಾಯಣಸ್ವಾಮಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.