ಹಂಪಿ ಉತ್ಸವದಲ್ಲಿ ರಚಿತ ಗೊಂಡ ಶಿಲಾ ಶಿಲ್ಪಗಳು

190

*ಹಂಪಿ ಉತ್ಸವ ಸಂದರ್ಭದಲ್ಲಿ ರಚಿತಗೊಂಡ ಶಿಲಾ ಹಾಗೂ ಕಾಷ್ಟ ಶಿಲ್ಪಗಳನ್ನು ಶೀಘ್ರವೇ ಪ್ರಮುಖ ಇಲಾಖೆಗಳಿಗೆ ಶಿಲಾ ಶಿಲ್ಪಗಳ ರವಾನೆ-ಬಿ.ನಾಗರಾಜ*

ಬಳ್ಳಾರಿ:ಕಳೆದ ಮೂರು ವರ್ಷಗಳಿಂದ ಹಂಪಿ ಉತ್ಸವ ಸಂದರ್ಭದಲ್ಲಿ ರಚಿತಗೊಂಡ ಶಿಲಾ ಹಾಗೂ ಕಾಷ್ಟ ಶಿಲ್ಪಗಳನ್ನು ಪ್ರಮುಖ ಇಲಾಖೆಗಳ ಕಚೇರಿಯಲ್ಲಿ ಅಂದ ಹೆಚ್ಚಿಸಲು ರವಾನಿಸುವುದಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಪ ನಿರ್ದೇಶಕ ಬಿ.ನಾಗರಾಜ್ ಹೇಳಿದ್ದಾರೆ.
ನಮ್ಮೂರು ಟಿ ವಿ ನೊಂದಿಗೆ ಮಾತನಾಡಿದ ಅವರು, ಶಿಲ್ಪಿಗಳಿಗೆ ಶಿಲೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿರುವ ಸರ್ಕಾರ ಕಳೆದ 3 ವರ್ಷದಿಂದ ಶಿಲೆ ಹಾಗೂ ಕಾಷ್ಟ ಶಿಲ್ಪಗಳನ್ನು ತಯಾರಿಸಿದೆ. ಹಂಪಿ ಉತ್ಸವ ವೇಳೆ ಸಾರ್ವಜನಿಕರ ಪ್ರದರ್ಶನಕ್ಕೆ ಇವುಗಳನ್ನು ಇಡಲಾಗುತ್ತದೆ. ಬಳಿಕ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಚೇರಿಯಲ್ಲಿ ಸಂಗ್ರಹಿಸಿಡಲಾಗಿದೆ. ತಮ್ಮ ಕಚೇರಿ ಸಭಾಂಗಣದಲ್ಲಿ ಒಟ್ಟು 45 ಶಿಲಾ ಶಿಲ್ಪಗಳು ಮತ್ತು 16 ಕಾಷ್ಟ ಶಿಲ್ಪಗಳನ್ನು ಇರಿಸಲಾಗಿದೆ. ಶೀಘ್ರವೇ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಜೊತೆ ಚರ್ಚಿಸಿ ಈ ಶಿಲೆಗಳನ್ನು ಪ್ರಮುಖ ಇಲಾಖೆಗಳಿಗೆ ರವಾನಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜನರಲ್ಲಿ ಸಂಸ್ಕøತಿಯ ಅರಿವು ಮೂಡಿಸಲು ಮತ್ತು ಇಲಾಖೆಗಳ ಅಂದ ಹೆಚ್ಚಿಸಲು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಅನಂತ ಶಯನ, ಸರಸ್ವತಿ, ಗಣಪತಿ, ನಾಗಕನ್ಯೆ, ಮಸ್ತಕದಿಂದ ಪುಸ್ತಕ, ಕಾಲ ಭೈರವ, ಆಲಿಂಗನ ಮೂರ್ತಿ, ನಾಗ ಯಕ್ಷಿ, ವಾಮನ, ನಾರಸಿಂಹ ಹೀಗೆ ಶೃಂಗಾರ, ಧಾರ್ಮಿಕ, ಐತಿಹಾಸಿಕ ಘಟನೆಗಳನ್ನು ಬಿಂಬಿಸುವಂತಹ ಗಂಗ, ಕದಂಬ, ಚಾಲುಕ್ಯ, ಹೊಯ್ಸಳ ಮತ್ತು ವಿಜಯನಗರ ಶೈಲಿಯ ಶಿಲೆಗಳನ್ನು ರಾಜ್ಯದ ವಿವಿಧ ಶಿಲ್ಪಿಗಳು ನಿರ್ಮಿಸಿದ್ದಾರೆ. ಕೆಲವು ಶಿಲ್ಪಗಳನ್ನು ಈಗಾಗಲೇ ಡಾ.ರಾಜ್ ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಚಯದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ. ಉಳಿದ ಶಿಲೆಗಳನ್ನು ಡಿಸಿ ಕಚೇರಿ, ಜಿಲ್ಲಾ ಪಂಚಾಯಿತಿ, ಬುಡಾ ಕಚೇರಿ, ಮಹಾನಗರ  ಪಾಲಿಕೆ, ಲೋಕೋಪಯೋಗಿ ಇಲಾಖೆ, ಈಜುಕೊಳದ ಕ್ರೀಡಾಂಗಣ ಹೀಗೆ ವಿವಿಧ ಇಲಾಖೆಗಳಲ್ಲಿ ಶಿಲ್ಪಗಳನ್ನು ಪ್ರತಿಷ್ಠಾಪಿಸಲು ಆಯಾ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.