ಎಂಟು ಗೋಲ್ಡ್ ಮೆಡಲ್‍ಗಳಿಸಿದ್ದ ಸೌಜನ್ಯಗಿಂದು ಕಸಾಪಯಿಂದ ಸನ್ಮಾನ

263

ಬೆಂಗಳೂರು ( ಕೆಆರ್‍ಪುರ): ಎಮ್‍ಎ ಸ್ನಾತಕೊತ್ತರ ಪದವಿಯಲ್ಲಿ ಪ್ರಥಮ ಸ್ಥಾನಗಳಿಸಿ ಎಂಟು ಗೋಲ್ಡ್ ಮೆಡಲ್‍ಗಳಿಸಿದ್ದ ಸೌಜನ್ಯಗಿಂದು ಕೆಆರ್‍ಪುರ ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‍ವತಿಯಿಂದ ಸನ್ಮಾನ ಮಾಡಲಾಯಿತು. ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ಮನೋಬಾವನೆ ಹೊಂದಿರುವ ಪೋಷಕರಿಗೆ ಸೌಜ್ಯನ್ಯ ಮಾದರಿಯಾಗಿದ್ದಾಳೆಂದು ಕೆಆರ್‍ಪುರ ಕ್ಷೇತ್ರದ ಕಸಾಪ ಅಧ್ಯಕ್ಷ ಕೆ.ಕೃಷ್ಮಮೂರ್ತಿ ತಿಳಿಸಿದರು.
ಎಮ್‍ಎ ಸ್ನಾತಕೊತ್ತರ ಪದವಿಯಲ್ಲಿ ಪ್ರಥಮ ಸ್ಥಾನಗಳಿಸಿ ಎಂಟು ಚಿನ್ನ ಪದಕಗಳನ್ನು ಪಡೆದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಳಿಗೆ ಅಭಿನಂದಿಸಿ ನಂತರ ಮಾತನಾಡಿದ ಅವರು, ತಾಯಿಯ ಕೂಲಿಯಿಂದಲೇ ವಿದ್ಯಾಭ್ಯಾಸ ನಡೆಸಿ 700ಕಾಲೇಜುಗಳನ್ನು ಒಳಗೊಂಡ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ 8 ಚಿನ್ನದ ಪದಕ ಪಡೆದಿರುವುದು ಶ್ಲಾಘನೀಯ,
ರಾಷ್ಟ್ರಕ್ಕೆ ಕೊಡುಗೆ ನೀಡಿರುವ ಗಣ್ಯರು ಸರ್ಕಾರಿ ಶಾಲೆಗಳಲ್ಲಿಯೇ ವಿದ್ಯಾಭ್ಯಾಸ ಮಾಡಿ ಸಾಧನೆ ಗೈದಿದ್ದಾರೆ, ತರಗತಿಗಳಿಗೆ ಗೈರಾಗಿ ಭವಿಷ್ಯವನ್ನು ಕಳೆದುಕೊಳ್ಳುವ ವಿದ್ಯಾರ್ಥಿಗಳಿಗೆ ಮತ್ತು ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ಮನೋಬಾವನೆ ಹೊಂದಿರುವ ಪೋಷಕರಿಗೆ ಸೌಜನ್ಯ ಮಾದರಿ ಎಂದರು.
ಇದೇ ವೇಳೆ ಮಾತನಾಡಿದ ಕಾಲೆಜಿನ ಪ್ರಾಂಶುಪಾಲ ಡಾ.ಹೆಚ್.ಸಿ.ರಾಮಣ್ಣ ಸಾಧನೆ ಮಾಡಲು ಬಡತನ ಅಡ್ಡವಲ್ಲ, ಏನು ಇಲ್ಲದರ ನಡುವೆಯೂ ಸೌಜನ್ಯ ಅದ್ವಿತೀಯ ಸಾಧನೆ ಗೈದಿರುವುದು ನಮ್ಮ ಕಾಲೇಜಿಗೆ ಹೆಮ್ಮೆಯ ಸಂಗತಿ ಎಂದರು.
ಎಂಟು ಚಿನ್ನದ ಪದಕಗಳಿಸಿರುವ ಸೌಜನ್ಯ ಮಾತನಾಡಿ ತನ್ನ ಜೀವನದ ಕಹಿ ನೆನಪುಗಳನ್ನು ಮೆಲಕು ಹಾಕಿ, ಮುಂದೆ ಕೆಎಎಸ್ ಮತ್ತು ಐಎಎಸ್‍ನಂತಹ ರಾಷ್ಟ್ರ ಸೇವೆಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಮಾಡುವ ಇಂಗಿತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜಯರಾಂ, ನರೇಂದ್ರ, ಕೋಶಾಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ರವಿ, ಬಾಲಕೃಷ್ಣ, ಶಾಂತಕೃಷ್ಣಮೂರ್ತಿ, ಸೇರಿದಂತೆ ಶಿಕ್ಷಕ ವೃಂಧದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಕೆ.ಕೃಷ್ಣಮೂರ್ತಿ, ಕೆಆರ್‍ಪುರ ಕಸಾಪ ಕ್ಷೇತ್ರಾಧ್ಯಕ್ಷ:
ಅದೇನೆ ಇರಲಿ ವಿದ್ಯಾರ್ಥಿಗಳು ತರಗತಿಗಳಲ್ಲಿ ಪಾಠ ಕೇಳುವುದೇ ಬೋರು ಎಂಬ ಭಾವನೆಯಿಮದ ಹಲವರು ತಮ್ಮ ಭವಿಷ್ಯಕ್ಕೆ ವಂಚಿಸಿಕೊಳ್ಳುತ್ತಿದ್ದಾರೆ, ಅಂತಹದರಲ್ಲಿ ತಂದೆಯ ನೆರವಿಲ್ಲದೆ, ತಾಯಿಯ ಶ್ರಮದಿಂದಲೇ ವಿದ್ಯಾಭ್ಯಾಸ ಮುಗಿಸಿ ಚಿನ್ನದ ಪದಕಗಳನ್ನು ಶ್ಲಾಘನೆಗೆ ಪಾತ್ರವಾಗಿದೆ.