ಆಂಬುಲೆನ್ಸ್ ಸಮಯ ಪ್ರಜ್ಞೆಯಿಂದ ಅವಳಿ ಮಕ್ಕಳ ಜನನ..

239

ಬಳ್ಳಾರಿ/ಹೊಸಪೇಟೆ:ರಾಜ್ಯದಲ್ಲಿ ಅದೇಷ್ಟೊ ಬಡರೋಗಿಗಳು ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದೆ, ಆಸ್ಪತ್ರೆಗೆ ತಲುಪಿಸುವಲ್ಲಿ ಸಿಬ್ಬಂದಿ ವಿಳಂಬದಿಂದ ಸಾಗಿಸುವ ಮಾರ್ಗ ಮದ್ಯೆ ಅಸುನೀಗಿದ ಪ್ರಕರಣಗಳು ವರದಿಯಾಗಿವೆ. ಆದ್ರೆ ಬಳ್ಳಾರಿಯ ಹೊಸಪೇಟೆ 108 ಆಂಬುಲೆನ್ಸ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯೆ ಸುರಕ್ಷೀತವಾಗಿ ಅವಳಿ ಮಕ್ಕಳಿಗೆ ಜನ್ಮನೀಡಿದ ಘಟನೆ ನಡೆದಿದೆ. ಜಿಲ್ಲೆಯ ಹೊಸಪೇಟೆ ತಾಲುಕಿನ ಅಯ್ಯನಹಳ್ಳಿ ಗ್ರಾಮದ ಲಕ್ಷ್ಮಿ ಎನ್ನುವ ಗರ್ಭಿಣಿ ಮಹಿಳೆ ಹೆರಿಗೆ ನೋವಿನಿಂದ ನೊವು ಉಂಟಾಗಿದ್ದು, ಪೋಷಕರು ಆಂಬುಲೆನ್ಸ್ ವಾಹನದ ಸಿಬ್ಬಂದಿಗೆ ವಿಷಯ ತಿಳಿಸಿ ಗ್ರಾಮದಿಂದ ಹೊಸಪೇಟೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ತೀವ್ರ ನೋವಿನಿಂದ ನರಳಿದ ಮಹಿಳೆಗೆ ಆಂಬುಲೆನ್ಸ್ ಸಿಬ್ಬಂದಿ ಅನೀಲ್ ಮತ್ತು ವಾಹನ ಚಾಲಕ ಮರಿಯಮ್ಮನಹಳ್ಳಿ ಬಳಿಯ ಡಣಾಪುರ ರಸ್ತೆಯ ಬಳಿ ಸುರಕ್ಷಿತವಾಗಿ ಹೆರಿಗೆ ಮಾಡಿಸಲು ಮುಂದಾಗಿ, ಅವಳಿ ಒಂದು ಗಂಡು ಒಂದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದು ತಾಯಿ ಮಕ್ಕಳು ಸುರಕ್ಷಿತವಾಗಿದ್ದಾರೆ.ನಂತರ ಹೊಸಪೇಟೆಯ ಸರ್ಕಾರಿ ಆ್ಪತ್ರೆಗೆ ದಾಖಲಿಸಿದ್ದಾರೆ. ಸ್ವಲ್ಪ ವಿಳಂಬವಾಗಿದ್ದರು ತಾಯಿ ಮಕ್ಕಳ ಪ್ರಾಣಕ್ಕೆ ತೊಂದರೆಯಾಗುತ್ತಿತ್ತು ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಸುರಕ್ಷಿತವಾಗಿದ್ದಾರೆ ಎಂದು ಆಂಬುಲೆನ್ಸ್ ಸಿಬ್ಬಂದಿ ಕಾರ್ಯಕ್ಕೆ ವೈದ್ಯರು, ಮಹಿಳೆಯ ಪೋಷಕರು ಶ್ಲಾಘಿಸಿದ್ದಾರೆ.

ನಾಗರಾಜ್, ಹೆರಿಗೆಯಾದ ಮಹಿಳೆಯ ಪತಿ.