ವರ್ತೂರಿನಲ್ಲಿ ಅದ್ದೂರಿ ವೆಂಕಟರಮಣ ಸ್ವಾಮಿ ರಥೋತ್ಸವ

273

ಬೆಂಗಳೂರು: ನಗರ ಆಧುನಿಕತೆ, ತಂತ್ರಜ್ಞಾನದಲ್ಲೆ ಎಷ್ಟೇ ವೇಗವಾಗಿ ಬೆಳೆದರು ಪೂರ್ವಿಕರ ಆಚರಣೆಗಳು, ಸಂಪ್ರದಾಯಗಳನ್ನು ಜನರು ಇಂದಿಗು ಚಾಚು ತಪ್ಪದಂತೆ ಪಾಲಿಸಿಕೊಂಡು ಬರುತ್ತಿದ್ದಾರೆ. ಅದರಂತೆ ಬೆಂಗಳೂರು ಪೂರ್ವ ತಾಲೂಕಿನ ವರ್ತೂರಿನಲ್ಲಿ ಗ್ರಾಮ ದೇವರಾದ ಶ್ರೀ ವೆಂಕಟರಮಣ ಸ್ವಾಮಿಯ ರಥೋತ್ಸವವನ್ನು ಗ್ರಾಮಸ್ಥರು ಅದ್ದೂರಿಯಾಗಿ ನೆರವೇರಿಸಿದರು.

ಹೀಗೆ ಹಲವು ಕಲಾ ತಂಡಗಳೊಂದಿಗೆ ಸಾವಿರಾರು ಜನರು ಜಮಾಯಿಸಿ ಶ್ರೀ ವೆಂಕಟರಮಣ ಸ್ವಾಮಿಯ ಜಾತ್ರ ಮಹೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಿದ ದೃಶ್ಯ ಕಂಡುಬಂದದ್ದು ಬೆಂಗಳೂರಿನ ವರ್ತೂರಿನಲ್ಲಿ. ಪೂರ್ವಿಕರ ವಾಡಿಕೆಯಂತೆ ಪ್ರತಿ ವರ್ಷ ರಥಸಪ್ತಮಿಯಂದು ಗ್ರಾಮದಲ್ಲಿ ಜಾತ್ರ ಮಹೋತ್ಸವ ನಡೆಸಿಕೊಂಡು ಬರುತ್ತಿದ್ದು, ಈ ವರ್ಷವು ರಥೋತ್ಸವ ನಡೆಸುವ ಮೂಲಕ ಸ್ವಾಮಿಯ ಮನಸಂತೋಶ ಪಡಿಸಿದ್ದಾರೆ.

ಶ್ರೀಧರ್, ವರ್ತೂರು ನಿವಾಸಿ : ಇನ್ನು ವರ್ತೂರಿನ ರಥೋತ್ಸವಕ್ಕೆ ಬೆಂಗಳೂರಿನ ವಿವಿದೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದು ದೇವರ ಕೃಪೆಗೆ ಪಾತ್ರರಾದರು. ಇನ್ನು ರಥೋತ್ಸವದ ಅಂಗವಾಗಿ ವರ್ತೂರು ಗ್ರಾಮ ಗ್ರಾಮ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ರಾಜು, ಸ್ಥಳೀಯ ನಿವಾಸಿ: ಒಟ್ಟಾರೆ ಇತ್ತೀಚಿನ ನಗರೀಕರಣದ ದಿನಗಳಲ್ಲಿ ಗ್ರಾಮೀಣ ಸೊಗಡಿನ ಜಾತ್ರ ಮಹೋತ್ಸವ ಹಾಗೂ ರಥೋತ್ಸವಗಳ ಆಚರಣೆ ನಶಿಸಿಹೋಗುತ್ತಿರುವ ದಿನಗಳಲ್ಲಿ ವರ್ತೂರು ಜನರು ಅದ್ದೂರಿಯಾಗಿ ರಥೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ಹರ್ಷದಾಯಕವಾಗಿದೆ.