ಮುಗಿಬಿದ್ದ ಅಭಿಮಾನಿಗಳಿಗೆ ಲಾಠಿಚಾರ್ಚ್..!?

211

ರಾಯಚೂರು:ಶಾಸಕ ಮಾನಪ್ಪ ವಜ್ಜಲ್ ಅಭಿಮಾನಿಗಳ ಸಂಘದಿಂದ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಲನಚಿತ್ರ ನಟ ಯಶ್ ಆಗಮಿಸಿದ್ದ ಹಿನ್ನಲೆ ಅಭಿಮಾನಿಗಳು ಮುಗಿಬಿದ್ದ ಪರಿಣಾಮ ಲಾಠಿಚಾರ್ಚ್ ಮಾಡಲಾಯಿತು.

ಇಂದು ಲಿಂಗಸೂಗೂರು ಪಟ್ಟಣದ ಹೊರವಲಯದ ಕಲಬುರಗಿ ರಸ್ತೆಯ ಬದಿಯಲ್ಲಿ ನಿರ್ಮಿಸಿಲಾಗಿದ್ದ ಹೆಲಿಪ್ಯಾಡ್‍ಗೆ ಬರುತ್ತಿದಂತೆಯೇ ಯಶ್ ಅಭಿಮಾನಿಗಳು ಮುಗಿಬಿದ್ದರು. ಇದನ್ನು ನಿಯಂತ್ರಿಸುವಲ್ಲಿ ವಿಫಲರಾದ ಪೊಲೀಸರು ಲಾಠಿಚಾರ್ಚ್ ಮಾಡುವ ಮೂಲಕ ಅಭಿಮಾನಿಗಳನ್ನು ಹತೋಟಿಗೆ ತಂದರು. 250 ಸಾಮೂಹಿಕ ವಿವಾಹಗಳ ಕಾರ್ಯಕ್ರಮಕ್ಕೆ ಶಾಸಕ ಮಾನಪ್ಪ ವಜ್ಜಲ್, ನಟ ಯಶ್ ನವದಂಪತಿಗಳಿಗೆ ಆಹ್ವಾನ ನೀಡಿದ್ದರು. ಇಂದು ಸಾವಿರಾರು ಅಭಿಮಾನಿಗಳು ಯಶ್ ದಂಪತಿಗಳನ್ನು ನೋಡಲು ಮುಗಿಬಿದ್ದ ಪರಿಣಾಮ ಪೊಲೀಸರು ಕಂಗಾಲಾಗಿ ಲಾಠಿ ಚಾರ್ಚ್ ಮಾಡುವ ಪರಿಸ್ಥಿತಿ ಬಂದೋದಗಿತು.