ಶಾಲೆಯ ಮಕ್ಕಳಿಂದ “ಗುಲಾಬಿ ಚಳವಳಿ ”

419

ಹಾಸನ: ಆಲೂರು ತಾಲ್ಲೂಕಿನ ತಾಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಶಿಕ್ಷಕ ವೃಂದದಿಂದ ಇಂದು (ಫೆಬ್ರುವರಿ ೦೪, ೨೦೧೭) “ಗುಲಾಬಿ ಚಳವಳಿ” ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಊರಿನ ಬೀದಿ ಬೀದಿಗಳಲ್ಲಿ, ಅಂಗಡಿ ಮನೆಗಳ ಅಂಗಳಗಳಿಗೆ ಬೇಟಿನೀಡಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿವರಣೆ ನೀಡಿ ಅಂಥವರಿಗೆ ಮಕ್ಕಳಿಂದ ಗುಲಾಬಿ ಹೂ ಕೊಡಿಸುವುದರ ಮೂಲಕ ಜಾಗೃತೆ ಮೂಡಿಸಲಾಯಿತು.