ಜಿಲ್ಲಾಮಟ್ಟದ ಬಹಿರಂಗ ಸಭೆ…

432

ಬೀದರ್/ಬಸವಕಲ್ಯಾಣ: ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೇ ಜಯಂತಿ ನಿಮಿತ್ತ ನಗರದ ಹಳೆ ತಹಸಿಲ ಕಚೇರಿ ಆವರಣದಲ್ಲಿ ಸಂವಿಧಾನದ ಆಶಯ ಸಾಕಾರಕ್ಕಾಗಿ ಜಿಲ್ಲಾಮಟ್ಟದ ಬಹಿರಂಗ ಸಭೆ ಜರುಗಿತು. 

ಲೋಕೋಪಯೊಗಿ ಇಲಾಖೆ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಮಹಾರಾಷ್ಟ್ರದ ದಲಿತ ಮುಖಂಡ, ವಿಧಾನ ಪರಿಷತ್ ಸದಸ್ಯ ಜೋಗೇಂದ್ರ ಕಾವಡೆ, ಡಿಎಸ್ಎಸ್ ರಾಜ್ಯ ಸಂಚಾಲಕ ಡಿ.ಜಿ. ಸಾಗರ, ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಮಾಜಿ ಸಚಿವ ಬಂಡೆಪ್ಪ ಖಾಶಂಪುರ, ಕೆಪಿಸಿಸಿ ಕಾರ್ಯದರ್ಶಿ ಬಿ. ನಾರಾಯಣರಾವ, ಮೀನಾಕ್ಷಿ ಪಾಟೀಲ, ಅಜರಲಿ ನವರಂಗ, ವಾಮನ ಮೈಸಲಗೆ, ಆನಂದ ದೇವಪ್ಪ, ತಾಪಂ ಅಧ್ಯಕ್ಷೆ ಯಶೋಧಾ ನಿಲಕಂಠ ರಾಠೊಡ ಸೇರಿದಂತೆ ಪ್ರಮುಖರು ಭಾಗವಹಿಸಿದರು