ಪೋಲಿಸ್ ಪೇದೆ ಮೇಲೆ ಡ್ಯಾಗರ್ ನಿಂದ ಹಲ್ಲೆ…

490

ಬೆಂಗಳೂರು/ಮಹದೇವಪುರ:ಹಸನ್ ಪಾಷ ಬಂಧಿಸಲು ತೆರಳಿದ್ದಾಗ ಹೆಚ್ ಎ ಎಲ್ ಪೇದೆ ರವಿ ದಾಸ್ಯಾಳ ಮೇಲೆ ಡ್ಯಾಗರ್ ನಿಂದ ಹಲ್ಲೆ ಮಾಡಲು ಯತ್ನಿಸಿದ.ಈ ವೇಳೆ ಮೊದಲ ಸುತ್ತು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ ಸಬ್ ಇನ್ಸ್ ಪೆಕ್ಟರ್ ಪ್ರಶೀಲಾ.ಪೋಲಿಸರ ಎಚ್ಚರಿಕೆ ನಿರ್ಲಕ್ಷಿಸಿ ಡ್ಯಾಗರ್ ನಿಂದ ಪೇದ ರವಿ ದಾಸ್ಯಳ ಮೇಲೆ ಹಲ್ಲೆ ಮಾಡಿ ಉಳಿದ ಸಿಬ್ಬಂದಿ ಮೇಲೆ ಹಲ್ಲೆ ಮುಂದಾಗಿದ್ದ.ಈ ವೇಳೆ ಆತ್ಮರಕ್ಷಣೆಗಾಗಿ ಸಬ್ ಇನ್ಸ್ಪೆಕ್ಟರ್ ಪ್ರಶೀಲಾ ಹಸನ್ ಪಾಷ ಎಡ ಮೊಣಕಾಲಿಗೆ ಸರ್ವಿಸ್ ರಿವಾಲ್ವರ್ ನಿಂದ ಗುಂಡು ಹಾರಿಸಿದ್ದಾರೆ.೨೬ ರಂದು ದಂಪತಿಗಳ ಹತ್ಯೆಗೈದ ಆರೋಪಿಗಳು,ಮನೆಯಲ್ಲಿದ್ದ ೫೦ ಸಾವಿರ ನಗದು ಮತ್ತು ೨೦೦ ಗ್ರಾಂ ಚಿನ್ನಾಭರಣ ದೋಚಿ,ಮೂವರು ಹಂಚಿಕೊಂಡಿದ್ದಾರೆ.ನೆನ್ನೆ ಮತ್ತೆ ಮನೆಗೆ ತೆರಳಿ ಗ್ಯಾಸ್ ಲೀಕ್ ಮಾಡಿ, ಸ್ಪೋಟಿಸುವ ಸಂಚು ಮಾಡಿ ಪ್ರಯತ್ನ ಮಾಡಿದ್ದಾರೆ ಆದ್ರೆ ವಿಫಲವಾಗಿದೆ..