ಮತ್ತೆ ಸಿಕ್ಕಿ ಬಿದ್ದನ ಖೈದಿ…?

263

ಬಳ್ಳಾರಿ/ಹಗರಿಬೊಮ್ಮನಹಳ್ಳಿ

ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಕೊಲೆ ಮಾಡಿ ಜೈಲು ಸೇರಿದ !

* ಜೀವಾವಧಿ ಶಿಕ್ಷೆಯಲ್ಲಿದ್ದಾಗ ಪೆರೋಲ್ ಆಗಿಬಂದೂ ಪೊಲೀಸರಗೆ ಚಳ್ಳೆ ಹಣ್ಣು ತಿನಿಸಿದ !

* ಹೈಕೋರ್ಟ್ ಛೀಮಾರಿ ಹಾಕಿದ ನಂತರ ಆರೋಪಿ ಪತ್ತೆ ಮಾಡಿದ್ರೂ ಪೊಲೀಸರು !

* ಹೆಸರು ಬದಲಿಸಿ ಮತ್ತೊಂದು ಮದುವೆಯಾಗಿದ್ದ ಖೈದಿ ಸಿಕ್ಕಿದ್ದೇಗೆ ಗೊತ್ತಾ ?

. ಆತ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ಪರಾರಿಯಾಗಿದ್ದ ಖೈದಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪೆರೋಲ್ ಮೇಲೆ ಆಚೆಗೆ ಬಂದೂ ಮತ್ತೊಂದು ಮದುವೆಯಾಗಿದ್ದ ಭೂಪ. ಹೆಸರು ಬದಲಿಸಿಕೊಂಡು ಪೊಲೀಸರಿಗೆ ಬರೋಬ್ಬರಿ ೭ ವರ್ಷಗಳ ಕಾಲ ಚಳ್ಳೆಹಣ್ಣು ತಿನಿಸಿದ್ದ ಖೈದಿಯನ್ನು ಬಂಧಿಸುವಂತೆ ಹೈಕೋರ್ಟ್ ಛೀಮಾರಿ ಹಾಕಿದ ನಂತರ ಪೊಲೀಸರು ಸತ್ತನೋ ಬಿದ್ದು ಅಂತಾ ಕರ್ತವ್ಯ ನಿರ್ವಹಿಸಿ ಖೈದಿಯನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ, ಹಗರಿಬೊಮ್ಮನಹಳ್ಳಿ ತಾಲೂಕಿನ ರಾಯನಾಳ ಗ್ರಾಮದ ಗೋವಿಂದ ನಾಯ್ಕ್ ಎನ್ನುವ ೩೩ ವರ್ಷದ ವ್ಯಕ್ತಿ ೨೦೦೯ರಲ್ಲಿ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದಕ್ಕೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿತ್ತು, ಆದ್ರೆ ಖೈದಿ ಗೋವಿಂದನಾಯ್ಕ್ ೨೦೧೧ರಲ್ಲಿ ತಂದೆ ನೋಡುವ ನೆಪದಲ್ಲಿ ಪೆರೋಲ್ ಮೇಲೆ ಆಗಮಿಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ಪರಾರಿಯಾಗಿದ್ದ. ಆಂದ್ರ- ತೆಲಗಾಂಣದಲ್ಲಿ ತೆಲೆಮರೆಸಿಕೊಂಡು ಮತ್ತೊಬ್ಬಳನ್ನು ಮದುವೆಯಾಗಿ ಸಂಸಾರ ಮಾಡುತ್ತಿದ್ದ. ಆದ್ರೆ ಖೈದಿಯನ್ನು ಪತ್ತೆ ಮಾಡುವಂತೆ ಹೈಕೋರ್ಟ್ ಛೀಮಾರಿ ಹಾಕಿದ ನಂತರ ಹಗರಿಬೊಮ್ಮನಹಳ್ಳಿ ಪೊಲೀಸರು ಸತ್ತನೋ ಬಿದ್ದನೋ ಅಂತಾ ತಂಡ ರಚಿಸಿಕೊಂಡು ಖೈದಿಯನ್ನು ಬಂದಿಸಿ ಕರೆತಂದಿದ್ದಾರೆ, ತೆಲಗಾಂಣದಲ್ಲಿ ಸಂತೋಷ ಜಾಧವ ಎನ್ನುವ ಹೆಸರಿನಲ್ಲಿ ಆಧಾರ ಕಾರ್ಡ. ರೇಷನ್ ಕಾರ್ಡ. ವೋಟರ್ ಐಡಿ ಮಾಡಿಸಿಕೊಂಡು ಆರಾಮ ಆಗಿ ಜೀವನ ಸಾಗಿಸುತ್ತಿದ್ದ ಖೈದಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೊಲೆ ಮಾಡಿ ಜೀವಾವಧಿ ಶಿಕ್ಷೆ ಅನುಭವಿಸುವ ವೇಳೆಯಲ್ಲಿ ಪರಾರಿಯಾಗಿ ಮತ್ತೊಂದು ಮದುವೆ ಮಾಡಿಕೊಂಡು ಮಕ್ಕಳದೊಂದಿಗೆ ಜೀವನ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಇದೀಗ ಮತ್ತೆ ಜೈಲಿಗೆ ಅಟ್ಟಿದ್ದಾರೆ,