ಲಂಚಮುಕ್ತ ವೇದಿಕೆಯ ವತಿಯಿಂದ ಸನ್ಮಾನ…

210

ಚಾಮರಾಜನಗರ/ಕೊಳ್ಳೇಗಾಲ:ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಎ.ಎಚ್.ಗೋವಿಂದ್ ಅವರಿಗೆ ಜಿಲ್ಲಾ ಲಂಚಮುಕ್ತ ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಲಂಚಮುಕ್ತ ವೇದಿಕೆಯ ಪದಾಧಿಕಾರಿಗಳು ಎ.ಎಚ್.ಗೋವಿಂದ್ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಗೌರವ ಸಲ್ಲಿಸಿದರು.ಸನ್ಮಾನ ಸ್ವೀಕರಿಸಿದ ಎ.ಎಚ್.ಗೋವಿಂದ ಮಾತನಾಡಿ, ರಾಜಶೇಖರ್ ಕೋಟಿ ಆರ್ಶಿವಾದದಿಂದಾಗಿ ನನಗೆ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಲಂಚಮುಕ್ತ ವೇದಿಕೆಯ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್, ಉಪಾಧ್ಯಕ್ಷ ಪ್ರಭಾಕರ್, ಕಾರ್ಯದರ್ಶಿ ನಂಜುಂಡಸ್ವಾಮಿ, ಮುಖಂಡ ನಟರಾಜಪ್ಪ, ಪದಾಧಿಕಾರಿಗಳಾದ ಮುಸ್ತಕ್ ಅಹಮದ್, ಕಿರಣ್ ಕುಮಾರ್, ಶ್ರೇಯಸ್,ಪತ್ರಕರ್ತರಾದ ಬಸಂತ್ ಮೋಟಾಯ್, ಮಹೇಶ್, ಮಹಮ್ಮದ್ ಯುನೂಸ್, ಮರಿಸ್ವಾಮಿಸೋಮು, ತಿರುಮಲ್ಲೇಶ್ ಉಪಸ್ಥಿತರಿದ್ದರು.