ಆರೋಗ್ಯವಂತ ಸಮಾಜ ನಿರ್ಮಾಣ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ

298

ಬೆಂಗಳೂರು (ಕೃಷ್ಣರಾಜಪುರ): ಕುಷ್ಠ ರೋಗ ಮುಕ್ತ ದೇಶವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬರು ಅರೋಗ್ಯ ಇಲಾಖೆಯೊಂದಿಗೆ ಕೈಜೋಡಿಸ ಬೇಕೆಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಪುಷ್ಪರಾಜ್ ತಿಳಿಸಿದರು.
ಇಲ್ಲಿನ ಚಿಕ್ಕನಾಯಕನಹಳ್ಳಿ ಲೆಪ್ರೊಸಿ ಕಾಲೋನಿಯಲ್ಲಿ ಜಿಲ್ಲಾ ಸ್ಪಷ್ ಕುಷ್ಠರೋಗದ ವತಿಯಿಂದ ಆಯೋಜಿಸಿದ್ದ ಕುಷ್ಠ ರೋಗದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುಷ್ಠ ರೋಗ ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಮಾರಕವಾದ ಕಾಯಿಲೆಯಾಗಿದ್ದು, ಕುಷ್ಟ ರೋಗಕ್ಕೆ ತುತ್ತಾದ ವ್ಯಕ್ತಿಗಳ ಜೀವನ ಚಿಂತಾಜನಕವಾದಂತಹದ್ದಾಗಿರುತ್ತದೆ,
ಆರೋಗ್ಯವಂತ ಸಮಾಜ ನಿರ್ಮಾಣ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದ್ದು, ಕುಷ್ಠ ರೋಗಿಗಳನ್ನು ಕಂಡರೆ ಕೂಡಲೆ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸುವಲ್ಲಿ ನಾಗರಿಕರು ಜವಾಬ್ದಾರಿ ಮೆರೆಯಬೇಕಿದೆ ಎಂದರು,
ಆರೋಗ್ಯಯುತ ಸಮಾಜಕ್ಕೆ ಕುಷ್ಠ ರೋಗ ಸವಾಲಾಗಿದ್ದು, ಕುಷ್ಠ ರೋಗ ಮುಕ್ತ ಸಮಾಜವನ್ನು ನಿರ್ಮಿಸಲು ನಮ್ಮ ಇಲಾಖೆ ಭದ್ಧವಾಗಿದೆ ಅದಕ್ಕೆ ನಾಗರೀಕರು ಕೈಜೋಡಿಸಬೇಕೆಂದರು.
ಕುಷ್ಠ ರೋಗದ ಅರಿವಿನ ಕಾರ್ಯಕ್ರಮದಲಿ ಸ್ವಯಂ ಸೇವಾ ಸಂಘಗಳು ಪಾಲ್ಗೊಂಡಿದ್ದವು, ಸಾರ್ವಜನಿಕರಿಗೆ ಕುಷ್ಠ ರೋಗದ ಲಕ್ಷಣ ಮತ್ತು ಅದನ್ನು ತಡೆಗಟ್ಟುವುದರ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಅರೋಗ್ಯ ಇಲಾಖೆಯ ಉಪ ನಿರ್ದೇಶಕ ಡಾ.ಪ್ರಭುಗೌಡ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ನದೀಮ್ ಅಹಮದ್, ತಾಲ್ಲೂಕು ಆರೋಗ್ಯ ಅಧಿಕಾರಿ ಚಂದ್ರಶೇಖರ್, ಸ್ಥಳೀಯ ವೈದ್ಯಾಧಿಕಾರಿ ಡಾ.ರಘುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.