ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆ.

224

ತುಮಕೂರು: ಮಾರುತಿ ನಗರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಿಬಿ ಜ್ಯೋತಿ ಗಣೇಶ್ ಅವರ ನೇತೃತ್ವದಲ್ಲಿ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು .ತಿಗಳ ಸಮಾಜದ ಮುಖಂಡರಾದ ಎಚ್ಎಂಟಿ ಯೂನಿಯನ್ನ ಉಪಾಧ್ಯಕ್ಷರಾದ ಸಿದ್ದರಾಜು. ಗೋಪಿ .ವೆಂಕಟಪ್ಪ ಇನ್ನೂ ಅನೇಕ ಮಂದಿ ಬಿಜೆಪಿ ಸೇರ್ಪಡೆ ಯಾದರು.ಎಚ್ಎಂಟಿ ಯೂನಿಯನ್ನ ಉಪಾಧ್ಯಕ್ಷ ಸಿದ್ದರಾಜು ಅವರು ಮಾತನಾಡಿ ಜಿಬಿ ಜ್ಯೋತಿ ಗಣೇಶ್ ಅವರ ವ್ಯಕ್ತಿತ್ವವನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗಿದ್ದೇವೆ.ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮಾಜ ನಿಮ್ಮ ಜೊತೆಯಲ್ಲಿದ್ದು ಬಿಜೆಪಿಯನ್ನು ಜಯಶೀಲರನ್ನಾಗಿ ಮಾಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಸಿಎನ್ ರಮೇಶ್. ನಗರ ಪ್ರಧಾನ ಕಾರ್ಯದರ್ಶಿ ರವೀಶಯ್ಯ .ಹಿಂದುಳಿದ ಒಕ್ಕೂಟದ ಅಧ್ಯಕ್ಷ ದನಿಯಾ ಕುಮಾರ್ .ನಗರ ಬಿಜೆಪಿ ಉಪಾಧ್ಯಕ್ಷ ಹಾಗೂ ತಿಗಳ ಸಮಾಜ ಯಜಮಾನ್ ಗಂಗಾ ಹನುಮಣ್ಣ .ಎಸ್ಟಿಡಿ ನಾಗರಾಜು. ವಿಷ್ಣುವರ್ಧನ್. ಜಗದೀಶ್. ರಕ್ಷಿತ್ ಕುಮಾರ್. ಕೃಷ್ಣಮೂರ್ತಿ .ವಿಠ್ಠಲ್. ಮತ್ತಿತರರು ಹಾಜರಿದ್ದರು .