ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನೇರಳೆ ಮರ ಬೆಂಕಿಗೆ ಅಹುತಿ

349

ಬೆಂಗಳೂರು (ಕೃಷ್ಣರಾಜಪುರ): ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 25 ವರ್ಷದ ನೇರಳೆ ಮರ ಬೆಂಕಿಗೆ ಅಹುತಿಯಾಗಿದೆ.
ಕೆಆರ್‍ಪುರದಿಂದ ದೇವಸಂದ್ರಕ್ಕೆ ತೆರಳುವ ಮುಖ್ಯರಸ್ತೆಯ ರುದ್ರ ಭೂಮಿ ಬಳಿ ಇರುವ ನೆರಳೆ ಮರದ ಬದಿಯಲ್ಲಿ, ಸಾರ್ವಜನಿಕರು ಹಾಕಿದ್ದ ಕಸಕ್ಕೆ ಬೆಂಕಿ ಇಟ್ಟ ಪರಿಣಾಮ 25 ವರ್ಷಗಳಿಂದ ಇದ್ದ ಮರವೊಂದು ಸುಟ್ಟು ಕರಕಲಾಗಿದೆ, ಬೆಂಕಿಯ ಕೆನ್ನಾಲಿಗೆಗೆ ಬಲಿಯಾದ ಮರ ಸಂಪೂರ್ಣವಾಗಿ ಸುಟ್ಟುಹೋಗಿದ್ದು. ಇಂದೊ ನಾಳೆಯೋ ಬೀಳುವಂತಹ ಸ್ಥಿತಿಗೆ ತಲುಪಿದೆ. ಬಿಬಿಎಂಪಿ ಪೌರ ಕಾರ್ಮಿಕರು ಕಸ ಸಂಗ್ರಹಣೆಗೆ ವಿಳಂಬ ಮಾಡುವ ಕಾರಣ ಸಾರ್ವಜನಿಕರು ದೇವಸಂದ್ರ ಮುಖ್ಯ ರಸ್ತೆಯ ಮರದ ಬದಿಯಲ್ಲೇ ಕಸ ಸುರಿಯಲಾಗುತ್ತಿದೆ. ರಸ್ತೆ ಬದಿಯಲ್ಲಿ ಸಂಗ್ರಹಗೊಳ್ಳುವ ಕಸಕ್ಕೆ ಕಿಡಿಗೆಡಿಗಳು ಬೆಂಕಿಯನ್ನೂ ಹಚ್ಚಿರುವುದರಿಂದ ಮರ ಬೆಂಕಿಗೆ ಅಹುತಿಯಾಗಿದೆ.  ಬಿಬಿಎಂಪಿ ಮತ್ತು ಸರ್ಕಾರ ಪರಿಸರ ಮರಗಳ ಸಂರಕ್ಷಣೆಗೆ ಕೋಟ್ಯಾಂತರ ರೂ ಹಣ ವ್ಯಯಿಸುತ್ತಿದೆ ಯಾದರೂ ಅಸ್ಥಿತ್ವದಲ್ಲಿರುವ ಮರಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ ಎಂದು ಸಾರ್ವಜನಿಕರ ದೂರುತ್ತಿದ್ದಾರೆ.
ದೇವಸಂದ್ರ ಮುಖ್ಯ ರಸ್ತೆಯಲ್ಲಿರುವ ಮರದ ಬದಿಯಲ್ಲಿ ಸಾರ್ವಜನಿಕರು ಕಸ ಸುರಿಯುತ್ತಿರುವುದರಿಂದ ತಿಪ್ಪೆಗೊಂಡಿಯಾಂತಗಿದೆ. ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ ಪೌರ ಕಾರ್ಮಿಕರಿಗೆ ಸಾರ್ವಜನಿಕರು ನೀಡುಬೇಕೆಂದು ಬಿಬಿಎಂಪಿ ಕಟ್ಟುನಿಟ್ಟಿನ ಆದೇಶ ಮಾಡಿದ್ದರೂ ಸಹ ಸಾರ್ವಜನಿಕರು ಇದಕ್ಕೆ ಸೊಪ್ಪು ಹಾಕದೆ ಎಲ್ಲಂದರಲ್ಲಿ ಕಸ ಸುರಿಯುತ್ತಿದ್ದಾರೆ. ಇದನ್ನು ತಡೆಯಲು ಪಾಲಿಕೆ ಸಂಪೂರ್ಣ ವಿಫಲವಾಗಿದೆ. ದಿನದ 24 ಗಂಟೆಯು ಸಾರ್ವಜನಿಕರು ಸಂಚಾರಿಸುವ ರಸ್ತೆಯ ಬದಿಯಲ್ಲಿ ಮರ ಸಂಪೂರ್ಣವಾಗಿ ಸುಟ್ಟುಹೋಗಿದ್ದು. ಇಂದೊ ನಾಳೆಯೋ ಬೀಳುವಂತಹ ಸ್ಥಿತಿಗೆ ತಲುಪಿರುವುದರಿಂದ ಯಾವಗ ಬೇಕಾದರೂ ಬೀಳಬಹದು. ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಸಂಬಂದಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮರದ ಪಕ್ಕದಲ್ಲಿಯೇ ವಿದ್ಯುತ್ ಕಂಬಗಳನ್ನು ಅಳವಡಿಸಿರುವುದರಿಂದ ವಿದ್ಯುತ್ ತಂತಿಗಳು ಸಹ ಹಾದುಹೋಗಿದ್ದು ಮರ ಉರುಳಿ ಬಿದ್ದರೆ ಹೆಚ್ಚಿನ ಅನಾಹುತ ಸಂಭವಿಸುವುದರಲ್ಲಿ ಎರಡು ಮಾತಿಲ್ಲ. ಕಿಡಿಗೆಡಿಗಳು ತ್ಯಾಜ್ಯಕ್ಕೆ ಬೆಂಕಿ ಹಚ್ಚಿರುವುದರಿಂದ ಪರಿಸರ ಮಾಲಿನ್ಯಕ್ಕೆ ಎಡೆಮಾಡಿಕೊಟ್ಟಿದೆ.