ಅಸಹಾಯಕ ನಗರಸಭೆ ಅಧಿಕಾರಿಗಳ ಅಳಲು

564

ದೊಡ್ಡಬಳ್ಳಾಪುರ: ನಗರಸಭೆ ಅಧಿಕಾರಿಗಳಿಗೆ ಕರ್ತವ್ಯನಿರ್ವಹಿಸಲು ಆಗುತ್ತಿಲ್ಲವಂತೆ.ಅಕ್ರಮಗಳನ್ನು ಪ್ರಶ್ನಿಸಲು, ತೆರೆವುಗೊಳಿಸಲೂ ಅಗುತ್ತಿಲ್ಲ ಪ್ರತಿಯೊಂದರಲ್ಲೂ ಮೂಗು ತೂರಿಸುವ ರಾಜಕಾರಣಿಗಳಿಂದ ಒತ್ತಡ ತರುವ ಪ್ರಭಾವಿಗಳಿಂದ ನಿಷ್ಟಾವಂತ ಅಧಿಕಾರಿಗಳು ಬೇಸತ್ತಿದ್ದಾರಂತೆ. ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುಜುಗರ ಪಡುವಂತಹ ಪರಿಸ್ಥಿತಿ ನಮಗಾಗಿದೆ. ನಮ್ಮ ಮೇಲಧಿಕಾರಿಗಳೂ ನಮಗೆ ಸಹಕರಿಸಲು ಅಶಕ್ತರಾಗಿದ್ದಾರೆ ಎಂದು ತಮ್ಮ ಅಸಹಾಯಕತೆಯನ್ನು ನಗರಸಭೆ ಅಧ್ಯಕ್ಷರ ಮುಂದೆ ತೋಡಿಕೊಳ್ಳುತ್ತಿರುವ ಇಂಜನೀಯರ್ ಒಬ್ಬರ ಅಳಲು. ಈ ದೃಶ್ಯದಲ್ಲಿದೆ ನೋಡಿ.
ಇಲ್ಲಿ ಜನ ಸಾಮಾನ್ಯರ ,ಮಾದ್ಯಮದವರು ನೀಡುವ ದೂರುಗಳತ್ತ ನಿರ್ಲಕ್ಷ್ಯ ತೋರುವ ಮಾನ್ಯ ಪೌರಾಯುಕ್ತರು ಡಾ.ಬಿಳಿಕೆಂಚಪ್ಪನವರು. ಸಂಬಂಧ ಪಟ್ಟ ಅಧಿಕಾರಿಗಳಿಗೂ ಸೂಕ್ತ ನಿರ್ಧೇಶನ ನೀಡಿ ಅಕ್ರಮಗಳನ್ಮು ತಡೆಗಟ್ಟ ಬೇಕಿದ್ದ ಪೌರಾಯುಕ್ತರನ್ನು ಪ್ರಶ್ನೆ ಮಾಡಿದರೂ ಹಾರಿಕೆ ಉತ್ತರ ನೀಡಿ ನುಳಿಚಿಕೊಳ್ಳುವ ಇವರು ಹೆಸರಿಗಷ್ಟೆ ನಗರಸಭಾ ಪೌರಾಯುಕ್ತರಾಗಿದ್ದು ಅಕ್ರಮಾರಕರೊಂದಿಗೆ ಒಪ್ಪಂದ ಮಾಡಿಕೊಂಡವರಂತೆ ವರ್ತಿಸುತ್ತಾ, ಪೂರ್ಣವಾಗಿ ರಾಜಕಾರಣಿಗಳ ಕೈಗೊಂಬೆ ಯಾಗಿದ್ದಾರೆ ಎಂಬ ಆರೋಪ ಇಲ್ಲಿ ಸಾಬೀತಾಗ ತೊಡಗಿದೆ.
ಇತ್ತೀಚೆಗೆ ನಗರದ ಜನನಿಬಿಡ ರಸ್ತೆಗಳಲ್ಲಿ ಒಂದಾದ ತಾಲ್ಲೂಕು ಕಚೇರಿ ರಸ್ತೆಯಲ್ಲಿ ಅಕ್ರಮವಾಗಿ ವಾಸಯೋಗ್ಯ ಮನೆಯೊಂದನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ಯಿದ್ದು ಇಕ್ಕಟ್ಟಿನ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಜನಸಾಮಾನ್ಯರಿಗೆ ತೊಂದರೆ ಉಂಟುಮಾಡುತ್ತಿದ್ದಾರೆ ಸೂಕ್ತ ಕ್ರಮ ಜರುಗಿಸುವಂತೆ ದೂರು ಬಂದರೂ ದೂರನ್ನು ಕಸದ ಬುಟ್ಟಿಗೆಸೆದು ಅಕ್ರಮ ಕಟ್ಟಡದ ಮಾಲಿಕರ ಪರವಾಗಿ ಮಾತನಾಡುವ ಇವರು ದೂರುದಾರರೊಂದಿಗೆ ಏನು ಮಾಡೋನ ಸ್ವಾಮಿ ಕ್ರಮಕ್ಕೆ ಮುಂದಾದರೆ ರಾಕಕಾರಣಿಗಳ ಒತ್ತಡ ಬರ್ತಿದೆ ಸ್ವಲ್ಪ‌ಅಡ್ಜೆಸ್ಟ್ ಮಾಡ್ಕೊಲಿ ಅವರಿಗೆ ನೋಟೀಸು ನೀಡಿದ್ದೇವೆ ಎಂದಷ್ಟೇ ಹೇಳುವ ಇವರು ನಿಜವಾಗಿ ಅಧಿಕಾರಿಗಳೇನಾ? ಅನ್ನೋ ಅನುಮಾನ ಮೂಡಿಸುತ್ತೆ. ಕೇವಲ ತಿಂಗಳಿಗೊಮ್ಮೆ ಸಂಬಳ ಪಡೆಯುವುದಕ್ಕೇ ಇವರು ಅಧಿಕಾರಿಗಳಾ? ಪಾಪ ಇಂಥಹ ಅಧಿಕಾರಿಗಳನ್ನು ಇಷ್ಟಪಟ್ಟು ಕರೆಸಿಕೊಂಡ ನಮ್ಮ ಕ್ಷೇತ್ರದ ಜನಪ್ರಿಯ ಶಾಸಕರು,ಅಭಿವೃದ್ದಿಯ ಹರಿಕಾರ ಟಿ.ವೆಂಕಟರಮಣಯ್ಯ ನವರು ಇಂಥಹ ಅಸಹಾಯಕ ಅಧಿಕಾರಿಗಳಿಂದ ಯಾವ ರೀತಿಯ ನಗರಾಭಿವೃದ್ದಿಯ ನಿರೀಕ್ಷೆ ಮಾಡುತ್ತಿದ್ದಾರೊ ಅವರೆ ಹೇಳಬೇಕಿದೆ . 

ಇನ್ನೂ ಹೇಳಬೇಕೆಂದರೆ ಅಧ್ಯಕ್ಷನಾದರೇ ನಾನು ಊರನ್ನು ಏನೇನೋ ಮಾಡಿ ಉದ್ದಾರಮಾಡಿಬಿಡ್ತೇನೆ ಎಂದೆಲ್ಲಾ ಹೇಳಿಕೊಂಡಿದ್ದ ನಗರಸಭಾ ಅಧ್ಯಕ್ಷ ಮುದ್ದಪ್ಪ ರಾತ್ರಿಹಗಲೂ ನಿದ್ದೆಕೆಟ್ಟು ಬೀದಿಬೀದಿ ಸುತ್ತಿ ಕಾಮಗಾರಿ ವೀಕ್ಷಿಸುತ್ತಿರುವ ಮುದ್ದಪ್ಪ, ಕಾರ್ಯಕ್ರಮ ಉದ್ಘಾಟಿಸಿದ ಮುದ್ದಪ್ಪ ಹುಕ್ಕಿ ಹರಿಯುತ್ತಿರುವ ಯುಜಿಡಿ ಪರಿಶೀಲನೆ ಮಾಡುತ್ತಿರುವ ಮುದ್ದಪ್ಪ ಅಭಿವೃದ್ದಿಯ ಯೋಚನೆ ಮಾಡುತ್ತಿರುವ ಮುದ್ದಪ್ಪ ಎಂದೆಲ್ಲಾ ವಾಟ್ಸಪ್ ನಲ್ಲಿ ಫೋಟೊಗಳನ್ನು ತುಂಬಿಸಿ ಬಿಟ್ಟಿ ಪ್ರಚಾರ ಪಡೆಯುತ್ತಿರುವ ಮುದ್ದಪ್ಪ ರವರಿಗೆ ಜನಸಾಮಾನ್ಯರ ಕುಂದುಕೊರತೆಗಳತ್ತ ಗಮನವೇ ಇಲ್ಲ ಎನ್ನಬಹುದು.ಜನಸಾಮಾನ್ಯರು ನೀಡುವ ದೂರುಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಆ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗದೆ ಕೂತಲ್ಲೇ ಕನಸು ಕಾಣುತ್ತಾ,ತಮ್ಮ ಕದಮುಚ್ಚಿದ ಚೇಂಬರ್ ನಲ್ಲೇ ಕೂತು ಹೊಗಲು ಬಟ್ಟರ ಮಾತುಗಳಿಗೆ ತಲೆಯಾಡುಸುವುದರಲ್ಲೇ ಅವರ ಅರ್ಧ ಅಧಿಕಾರಾವಧಿ ಕಳೆದು ಹೋಗಿದೆ ಎನ್ನುವುದೇ ಮರೆತು ಬಿಟ್ಟಿದಾರೆ. ಯಾವುದೇ ರೀತಿಯ ಅಭಿವೃದ್ದಿಯೂ ಇವರಿಂದ ಆಗುತ್ತಿಲ್ಲ ಇವರಮೇಲೆ ಅಪಾರ ನಂಬಿಕೆ ಇಟ್ಟು ಅಧ್ಯಕ್ಷರನ್ನಾಗಿಸಿದ ಇವರ ಪಕ್ಷಕ್ಕೂ ಹೆಮ್ಮೆಪಡುವಂತಹ ಸಾಧನೆಯೂ ಇವರು ಮಾಡಿದ್ದಿಲ್ಲ, ಕಾರಣ ಅಧ್ಯಕ್ಷರ ಅಧಿಕಾರವೂ ಇವರ ಕೈಲಿಲ್ಲ ಇವರ ಪಕ್ಷದವರೇ ಆದ ಇನ್ನಿಬ್ಬರೂ ಅಧ್ಯಕ್ಷರ ಅಧಿಕಾರದಲ್ಲಿ ಪಾಲುದಾರರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪವೂ ಇದೆಯನ್ನಿ, ಒಟ್ಟಾರೆ ಇವರ ಮೇಲಿದ್ದ ಜನಸಾಮಾನ್ಯರ ನಂಬಿಕೆಗೆ ಎಳ್ಳುನೀರು ಬಿಟ್ಟಂತಾಗಿದೆ. ಯಾಕೋ ಗೊತ್ತಿಲ್ಲ ಪ್ರಶ್ನೆ ಮಾಡಬೇಕಿದ್ದ ವಿರೋಧ ಪಕ್ಷದವರ ಧ್ವನಿಯೂ ಕೇಸ್ತಿಲ್ಲ. ಏನ್ಮಾಡೋದು ಎಲ್ಲಾ ದೊಡ್ಡಬಳ್ಳಾಪುರ ಜನರ ದೌರ್ಭಾಗ್ಯ ಎಂದರೆ ತಪ್ಪಾಗಲಾರದು. ಆಯ್ಕೆ ಮಾಡಿದ ತಪ್ಪಿಗೆ ಅನುಭವಿಸಬೇಕಷ್ಟೆ⁠