ನೂತನ ಕ್ಯಾನ್ಸರ್ ಬ್ಲಾಕ್ ಉದ್ಘಾಟನೆ

245

ಬೆಂಗಳೂರು: ಮಾರಕ ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆ ಮುಂದಾಗಿದ್ದು, ನೂತನ ಕ್ಯಾನ್ಸರ್‌ ಸೆಂಟರ್ ಕೇಂದ್ರವನ್ನು ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಉದ್ಘಾಟಿಸಿದರು. ಬೆಂಗಳೂರಿನಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಮೂರನೇ ಕೇಂದ್ರ ಇದಾಗಿದ್ದು, ವೈದೇಹಿ ಆಸ್ಪತ್ರೆ ಸಂಸ್ಥಾಪಕ ದಿವಂಗತ ಶ್ರೀ ಆದಿಕೇಶವಲು ಹೆಸರಲ್ಲಿ ಸ್ದಾಪಿಸಿದ್ದು, ಸಾರ್ವಜನಿಕರ ಅನೂಕಲಕ್ಕಾಗಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲು ಮುಂದಾಗಿರುವುದರಕ್ಕೆ ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.