ಪುರಸಭೆಗೆ ಬೀಗ ಜಡೆದು ಪ್ರತಿಭಟನೆ…

554

ವಿಜಯಪುರ/ಸಿಂದಗಿ:ಪಟ್ಟಣದ ವಾರ್ಡಗಳಲ್ಲಿ ಹೆಣ್ಣು ಮಕ್ಕಳ ಶೌಚಾಲಯದ ಸಮಸ್ಯೆಯಿದ್ದು ಅಲ್ಲಿ ಶೌಚಾಲಯ ನಿರ್ಮಾಣ ಮಾಡುವಂತೆ ಪುರಸಭೆ ಆಢಳಿತಕ್ಕೆ ಒತ್ತಾಯಿಸಿ ವಾರ್ಡಗಳ ಮಹಿಳೆಯರು ಕೈಯ್ಯಲ್ಲಿ ಪ್ಲಾಸ್ಟಿಕ್ ಚಿಗೆಗಳನ್ನು, ಬಾರಿಗೆಗಳನ್ನು, ಬಕೆಟ್‍ಗಳನ್ನು ತಗೆದುಕೊಂಡು ಪಟ್ಟಣದ ಪುರಸಭೆಗೆ ಮುತ್ತಿಗೆ ಬೀಗ ಜಡೆದು ಪ್ರತಿಭಟನೆ ನಡೆಸಿದರು.ಪ್ರತಿಭಟನಾ ನಿರತ ವಾರ್ಡ ಮಹಿಳೆಯರು ಪುರಸಭೆಯ ಹಿರಿಯ ಆರೋಗ್ಯಾಧಿಕಾರಿ ಅಭಿಶೇಕ ಪಾಂಡ್ರೆ ಅವರಿಗೆ ಮನವಿ ನೀಡಲು ನಿರಾಕರಿಸಿ ಶಿರಸ್ತೇದಾರ ಎಸ್. ಎಂ. ತಾಳಿಕೋಟಿ ಅವರಿಗೆ ಮನವಿ ಸಲ್ಲಿಸಿದ ಪ್ರಸಂಗ ನಡೆಯಿತು.ಪುರಸಭೆಯ ವಾರ್ಡ ನಂಬರ 2, 3, 4, 5 ಮತ್ತು 6 ರಲ್ಲಿ ಮಹಿಳೆಯರಿಗೆ ಶೌಚಾಲಯದ ಸಮಸ್ಯೆಯಿದೆ. ಈ ಕುರಿತು ಸಾಕಷ್ಟು ಸಲ ಪುರೆಸಭೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಮೊದಲು ಶೌಚಾಲಯಕ್ಕೆ ಹೊರವಲಯದಲ್ಲಿ ಹೋಗುತ್ತಿದ್ದು ಈಗ ಪಟ್ಟಣ ಬೆಳೆದಿದೆ. ಇದರಿಂದಾಗಿ ಮಹಿಳೆಯರು ಶೌಚಾಲಯಕ್ಕೆ ಹೋಗಲು ಪರದಾಡುವ ದುಸ್ಥಿತಿ ಒದಗಿದೆ. ಶೌಚಾಲಯ ಕಟ್ಟಿಸಿಕೊಳ್ಳ ಬೇಕೆಂದರೆ ಸುಸಜ್ಜಿತ ಒಳಚರಂಡಿ ವ್ಯವಸ್ಥೆಯಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ. ಶಿಘ್ರದಲ್ಲಿ ಈ ವಾರ್ಡಗಳಲ್ಲಿ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಮಾಡಬೇಕು ಇಲ್ಲದಿದ್ದಲ್ಲ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಪುರಸಭೆಯ ವಾರ್ಡ ನಂಬರ 2, 3, 4, 5 ಮತ್ತು 6 ರ ಮಹಿಳೆಯರಾದ ಯಲ್ಲವ್ವ ಭೀರಗೊಂಡ, ಯಮನವ್ವ ಕೊಂಡಗೂಳಿ, ಸಾವಿತ್ರಿ ಜೇರಟಗಿ, ಜ್ಯೋತಿ ಭೀರಗೊಂಡ, ಮೊನಿಕಾ ಭೀರಗೊಂಡ, ಮಕವ್ವ ಭೀರಗೊಂಡ, ಶರಣವ್ವ ಭೂತಿ, ನೀಲಗಂಗವ್ವ ಭೂತಿ, ಲಕ್ಷ್ಮೀ ಜೇರಟಗಿ, ಕಸ್ತೂರಿ ಜಮಾದಾರ ಸೇರಿದಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಮ್ಮೂರು ಟಿವಿ ನಂದೀಶ ಸಿಂದಗಿ