ವಿಜೃಂಭಣೆಯ ಫಲಪೂಜೆ ಮಹೋತ್ಸವ…

257

ಹಂಪಿ ಶ್ರೀ ವಿರೂಪಾಕ್ಷೇಶ್ವರ ಹಾಗೂ ಪಂಪಾಂಭಿಕೆ ದೇವಿ ಫಲಪೂಜೆ ವಿಜೃಂಭಣೆಯಿಂದ ನಡೆದ ಮಹೋತ್ಸವ

ಬಳ್ಳಾರಿ/ಹೊಸಪೇಟೆ:ದಕ್ಷಣಿ ಕಾಶಿ ಖ್ಯಾತಿಯ ಹಂಪಿ ಶ್ರೀ ವಿರೂಪಾಕ್ಷೇಶ್ವರ ಹಾಗೂ ಪಂಪಾಂಭಿಕೆ ದೇವಿ ಫಲಪೂಜಾ ಮಹೋತ್ಸವದ ನಿಮಿತ್ತವಾಗಿ ವಿರೂಪಾಕ್ಷೇಶ್ವರ ದೇಗುಲದ ಪ್ರಾಗಂಣದಲ್ಲಿ ಮಂಗವಾರ ಕಾರ್ತಿಕ ದೀಪೋತ್ಸವ ಬೆಳಗಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ಫಲಪೂಜಾ ಮಹೋತ್ಸವ ಅಂಗವಾಗಿ ವಿರೂಪಾಕ್ಷ ಪ್ರತಿಮೆಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರ ನಾಮ ಆರ್ಚನೆ, ಮಹಾ ನೈವೇದ್ಯ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಶ್ರೀ ಪಂಪಾಂಭಿಕೆ ದೇವಿಗೆ ಅಭಿಷೇಕ, ಕುಂಕಮರ್ಚನೆ, ವಿಶೇಷ ಪೂಜೆ ನೆರವೇರಿಸಲಾಯಿತು.
ವಿಜಯನಗರ ಪ್ರಖ್ಯಾತ ಅರಸ, ಶ್ರೀ ಕೃಷ್ಣ ದೇವರಾಯರು ತಮ್ಮ ಪಟ್ಟಾಭಿಷೇಕ ಸಮಯದಲ್ಲಿ ಸಮರ್ಪಿಸಿದ ನವರತ್ನ ಖಚಿರ ಸುವರ್ಣ ಮುಖ ಕಮಲದೊಂದಿಗೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ಅಲಂಕರಿಸಿ, ಪೂಜೆ ಸಲ್ಲಿಸಲಾಯಿತು.
ಶ್ರೀ ವಿದ್ಯಾರಣ್ಯ ಪೀಠದ ಪೀಠಾಧಿಪತಿ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಜಿ, ಅವರ ನೇತೃತ್ವದಲ್ಲಿ ದೇವಸ್ಥಾನದ ಪ್ರಧಾನ ಆರ್ಚಕರಾದ ಪಿ.ಶ್ರೀನಾಥ ಶರ್ಮಾ, ಜೆ.ಎಸ್.ಮುರುಳಿಧರ ಶಾಸ್ತ್ರಿ, ಕೆ.ಮಂಜುನಾಥ ಜೋಶಿ ವೃಂದ, ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ತಾಲ್ಲೂಕಿನ ಕಡ್ಡಿರಾಂಪುರ ಶ್ರೀ ಮರಿದೇವ ಸಂಗೀತ ಸಾಂಸ್ಕøತಿ ಕಲಾವೃಂಧದವತಿಯಿಂದ ವಿರುಪಾಕ್ಷ ದೇಗುಲ ಪ್ರಾಂಗಣದಲ್ಲಿ ಜರುಗಿದ ಸಂಗೀತ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಶ್ರೀ ವಿದ್ಯಾರಣ್ಯ ಪೀಠದ ಪೀಠಾಧಿಪತಿ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಜಿ ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಅನಂದ್ ಸಿಂಗ್ ಭಾಗವಹಿಸಿದ್ದರು ಹುಬ್ಬಳ್ಳಿ-ಧಾರವಾಡ, ಗದಗ, ಕೊಪ್ಪಳ ರಾಯಚೂರು ಹಾಗೂ ಬಳ್ಳಾರಿ ಸೇರಿದಂತೆ ನೆರೆಯ ಆಂಧ್ರ ಹಾಗೂ ತೆಲಂಗಾಣ ದಿಂದ ಹಂಪಿಗೆ ಆಗಮಿಸಿದ್ದ ಭಕ್ತರು, ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.