ಪೌರ ಕಾರ್ಮಿಕರಿಗೆ ಬಿಸಿಯೂಟ ವಿತರಣೆ

496
poura karmikara bisi oote vitarane

ಬೆಂಗಳೂರು (ಕೃಷ್ಣರಾಜಪುರ): ನಾಗಾಲೋಟದಲ್ಲಿ ಬೆಳೆಯುತ್ತಿರುವ ನಗರವನ್ನು ಸ್ವಚ್ಚಗೊಳಿಸುವಲ್ಲಿ ಪೌರ ಕಾರ್ಮಿಕರ ಸೇವೆ ಅಪಾರ ಎಂದು ಶಾಸಕ ಅರವಿಂದ ಲಿಂಬಾವಳಿ ಅಭಿಪ್ರಾಯಪಟ್ಟರು. ಮಹದೇವಪುರ ಕ್ಷೇತ್ರದ ಎಸಿಇಎಸ್ ಬಡಾವಣೆಯಲ್ಲಿ ಬಿಬಿಎಂಪಿ ಮಹದೇವಪುರ ವಲಯದವತಿಯಿಂದ ಆಯೋಜಿಸಿದ್ದ ಮಹದೇವಪುರ ವಿಧಾನ ಸಭಾ ಕ್ಷೇತ್ರದ ಪೌರ ಕಾರ್ಮಿಕರಿಗೆ ಬಿಸಿಯೂಟ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುದ ಅವರು, ಬೆಳೆಯುತ್ತಿರುವ ನಗರಗಳಲ್ಲಿ ಕಸ ವಿಲೇವಾರಿ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಕಸ ವಿಲೇವಾರಿ ಮಾಡುವಲ್ಲಿ ಪೌರ ಕಾರ್ಮಿಕರು ಶ್ರಮ ಹೆಚ್ಚಿದೆ, ಬೆಳಗ್ಗೆ 5 ಗಂಟೆಗೆ ಕೆಲಸದಲ್ಲಿ ತೊಡಗುವ ಕಾರ್ಮಿಕರು, ತಮ್ಮ ಕೌಟುಂಬಿಕ ಜೀವನದಿಂದ ದೂರ ಉಳಿದು ಕಸ ವಿಲೇವಾರಿ ಮಾಡುವಂತಾಗಿದೆ. ಬೆಂಗಳೂರನ್ನು ಸ್ವಚ್ಚಗೊಳಿಸಲು ಹಗಲು ಇರಳು ಶ್ರಮಿಸುತ್ತಿರುವ ಪೌರ ಕಾರ್ಮಿಕರ ಸೇವೆ ಅಪಾರ ಎಂದರು. ಕಾರ್ಮಿಕರ ವೇತದಲ್ಲಿ ಲಾಭಿ ನಡೆಯುತ್ತಿರುವುದು ಸಮಾಜಕ್ಕೆ ಹಿತವಲ್ಲ, ಗುತ್ತಿಗೆದಾರರು ಸಂಬಳ ಕೊಡದೆ ಹಿಡಿದುಕೊಳ್ಳುತ್ತಿರುವುದು ದಂಡನಾರ್ಹ, ಕಾರ್ಮಿಕರ ವೇತನ ಸರಿಯಾದ ರೀತಿ ದೊರಕುವಂತೆ ಮಾಡಬೇಕಿದೆ ಎಂದರು. ಕಾರ್ಮಿಕರ ಆರೋಗ್ಯದ ರಕ್ಷಣೆಯೂ ಪಾಲಿಕೆಯ ಜವಾಬ್ದಾರಿಯೇ ಆಗಿದ್ದು, ಆರೋಗ್ಯ ತಪಾಸಣಾ ಶಿಭಿರಗಳನ್ನು ಹಮ್ಮಿಕೊಳ್ಳುವುದು ಅವರ ಆರೋಗ್ಯದೆಡೆ ಗಮನವಹಿಸುವ ಕಾರ್ಯ ಆಗಬೇಕೆಂದರು. ದಿನನಿತ್ಯ ಕಸ ವಿಂಗಡಣೆಯಲ್ಲಿ ತೊಡಗುವ ಕಾರ್ಮಿಕರು ಕೆಟ್ಟ ವಾಸನೆಯನ್ನೇ ಉಸಿರಾಡ ಬೇಕಿದೆ, ಕೊಳಕು ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಎಲ್ಲ ಕಾರ್ಮಿಕರೂ ಆರೋಗ್ಯ ದೃಷ್ಟಿಯಿಂದ ಪಾಲಿಕೆ ವಿತರಿಸಿರುವ ರಕ್ಷಾ ಕವಚಗಳನ್ನು ಬಳಸಿಯೇ ಕೆಲಸ ಮಾಡಬೇಕೆಂದು ತಿಳಿಸಿದರು. ಇದೆ ವೇಳೆ ಮಾತನಾಡಿದ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಚ ಭಾರತ ಅಭಿಯಾನಕ್ಕೆ ಮೀಸಲಿಟ್ಟಿದ್ದ 45ಕೋಟಿ ರೂ. ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ಹೀನ ಕೃತ್ಯ ಎಂದರು.
ತಮ್ಮ ಮನೆಗಳಿಂದ ಬೆಳಗ್ಗೆ 5ಗಂಟೆಗೆ ಬಂದು ಅಧಿಕಾರಿಗಳು ಸೂಚಿಸುವ ಪ್ರದೇಶದಲ್ಲಿ ಸ್ವಚ್ಚತೆಯಲ್ಲಿ ತೊಡಗುವ ಕಾರ್ಮಿಕರು, ಪೌಷ್ಟಿಕ ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ, ಕಾರ್ಮಿಕರ ರಕ್ಷಣೆ ನಮ್ಮಲ್ಲರ ಹೊಣೆಯಾಗಿದೆ, ಸ್ವಚ್ಚತೆಯಲ್ಲಿ ತೊಡಗಿರುವ ಕೈಗಳಿಗೆ ಬಲ ತುಂಬಲು ಮಧ್ಯಾಹ್ನದ ಬಿಸಿಯೂಟ ವಿತರಣೆ ಸದುಪಯೋಗವಾಗಲಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪೌರ ಕಾರ್ಮಿಕರಿದ್ದು ನಿಶಕ್ತಿಯಿಂದ ಬಳಲುವುದನ್ನು ತಡೆಯಲು ಊಟ ವ್ಯವಸ್ಥೆ ಅನುಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಎಸ್.ಮುನಿಸ್ವಾಮಿ, ಶ್ವೇತಾ ವಿಜಯ್ ಕುಮಾರ್, ರಮೇಶ್, ನಿತಿಷ್ ಪುರುಷೋತ್ತಮ್, ಪುಷ್ಪಾ ಮಂಜುನಾಥ್, ಆಶಾ ಸುರೇಶ್, ಹಾಗೂ ಬಿಬಿಎಂಪಿ ಆಧಿಕಾರಿಗಳು ಮತ್ತಿತರರು ಹಾಜರಿದ್ದರು.