ಕನ್ನಡ ರಾಜ್ಯೋತ್ಸವ ಹಾಗೂ ಶಾಸಕರ ಹುಟ್ಟುಹಬ್ಬ ಆಚರಣೆ.

266

ಚಾಮರಾಜನಗರ:ಪಟ್ಟಣದ ಉಪ್ಪಾರ ಬೀದಿಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಶಾಸಕ ಪುಟ್ಟರಂಗಶೆಟ್ಟಿ ಅವರ ೬೩ನೇ ಹುಟ್ಟುಹಬ್ಬವನ್ನು ಭಗೀರಥ ಯುವಕರ ಸಂಘದ ಸದಸ್ಯರು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಮಸಮುದ್ರದ ಯೋಧ ನಾಗೇಶ್ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಸಮಿತಿಯ ಮುಖಂಡರಾದ ರಾಜು, ನಾಗಶೆಟ್ಟಿ ಮಾತನಾಡಿ ನಮ್ಮ ಸಂಘದ ವತಿಯಿಂದ ಇಂದು ಕನ್ನಡಿಗರ ಹೆಮ್ಮೆಯ ಗುರುತಾದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತಸವಾಗಿದ್ದು, ದೀನ ದಲಿತರ ಕಣ್ಮನಿ, ಬಡವರ ಪರ ಕಾಳಜಿಯುಳ್ಳ ಹಾಗೂ ಸರ್ವ ಜನಾಂಗದ ಸಮಾನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜನಪ್ರಿಯ ಶಾಸಕ ಪುಟ್ಟರಂಗಶೆಟ್ಟರ ಜನ್ಮದಿನ ಆಚರಿಸುತ್ತಿದ್ದು ಇವರು ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು, ಮಾದರಿ ತಾಲ್ಲೂಕನ್ನಾಗಿ ಮಾಡಲು ಶ್ರಮಿಸುತದತ್ತಿದ್ದಾರೆ.

ದೇವರು ಇವರಿಗೆ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಆರೋಗ್ಯ,ಆಯಸ್ಸನ್ನು ಕರುಣಿಸಲೆಂದು ಆಶಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಮಹೇಶ್, ಶಂಕರ್, ಮಹೇಶ್ ಕೆಟಿಆರ್, ಪುನೀತ್, ಸತ್ಯ, ನಟರಾಜ್, ವಾಸು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ.