ಸರಣಿ ಕಳ್ಳತನ, ಪೊಲೀಸರ ವಿರುದ್ದ ಆಕ್ರೋಶ

220

ವಿಜಯಪುರ/ಇಂಡಿ: ಕಳ್ಳರು ತಮ್ಮ ಕೈಚಳಕ ತೋರಿಸಿ ಸರಣಿ ಅಂಗಡಿಗಳ ಕಳ್ಳತನ ಮಾಡಿ ಪರಾರಿಯಾದ ಘಟನೆ ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಎಪಿಎಂಸಿ ಎದುರಿನ ಪುರಸಭೆ ವಾಣಿಜ್ಯ ಸಂಕೀರ್ಣ, ಧನಶೆಟ್ಟಿ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ.
ಎರಡು ಮೊಬೈಲ್ ಶಾಪ್, ಎರಡು ಕಿರಾಣಿ ಅಂಗಡಿ ಹಾಗೂ ಎರಡು ಗೊಬ್ಬರ ಅಂಗಡಿಗಳಲ್ಲಿ ಕಳ್ಳರು ಕಳ್ಳತನ ಮಾಡಿ ಲಕ್ಷಾಂತರ ಮೌಲ್ಯ ನಗದು ಹಾಗೂ ವಸ್ತುಗಳು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಇನ್ನು ಈ ಕುರಿತು ಇಂಡಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ರು ಸ್ಥಳಕ್ಕೆ ಪೊಲೀಸರ‌ ಬಾರದೇ ಇರೋದಕ್ಕೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ತಡವಾಗಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ: ನಮ್ಮೂರು ಟಿವಿ ನಂದೀಶ