ಪ್ರತಿ ಮಗುವಿಗೂ ಲಸಿಕೆಗಳನ್ನು ಹಾಕಿಸುವುದು ಸೂಕ್ತ

240

ಬೆಂಗಳೂರು(ಕೃಷ್ಣರಾಜಪುರ): ದಡಾರ ಮತ್ತು ರುಬೆಲ್ಲಾ ಕಾಯಿಲೆಗಳು ಮಾರಣಾಂತಿಕವಾಗಿದ್ದು, ಮಕ್ಕಳು ಇವುಗಳಿಗೆ ಬಲಿಯಾಗದಂತೆ ಕೂಡಲೆ ಲಸಿಕೆ ಕೊಡಿಸಿ ಎಂದು ಪಲಿಕೆ ಸದಸ್ಯ ಎಸ್.ಮಿನಿಸ್ವಾಮಿ ತಿಳಿಸಿದರು.

ಮಹದೇವಪುರ ಕ್ಷೇತ್ರದ ಕಾಡುಗುಡಿಯ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದಡಾರ ಮತ್ತು ರುಬೆಲ್ಲಾ ಕಾಯಿಲೆಯ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯ ಕೊರತೆಯ ಕಾರಣ ಹಲವು ಮಾರಣಾಂತಿಕ ಕಾಯಿಲೆಗಳಿಗೆ ಮಕ್ಕಳು ತುತ್ತಾಗುವ ಸಾಧ್ಯತೆಗಳಿವೆ, ಮಾರಣಾಂತಿಕ ಕಾಯಿಲೆಗಳಿಂದ ಪೂರ್ವಜರು ಹಲವು ಸಮಸ್ಯೆಗಳಿಗೆ ತುತ್ತಾಗಿದ್ದು, ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಹಿನ್ನಡೆಯಾಗಿತ್ತು, ಕಾಲ ಕ್ರಮೇಣ ವೈದ್ಯಕೀಯ ಚಿಕಿತ್ಸಾ ಪದ್ದತಿಗಳು ಮುಂದುವರೆದಂತೆಲ್ಲಾ ಹಲವು ಮಾರಣಾಂತಿಕ ಕಾಯಿಲೆಗಳಿಂದ ಸಮಾಜ ಮುಕ್ತಿ ಹೊಂದುತ್ತಾ ಬಂದಿದೆ, ಇದೇ ರೀತಿ ದಡಾರ ಮತ್ತು ರುಬೆಲ್ಲಾ ಕಾಯಿಲೆಗಳೂ ಸಹ ಸಮಾಜದಲ್ಲಿ ಮತ್ತೆ ಮರುಕಳಿಸದಿರಲು ಇದೇ ತಿಂಗಳ 7ರಿಂದ 28ರವರೆಗೆ ಸರ್ಕಾರ ಉಚಿತವಾಗಿ ಲಸಿಕೆಗಳನ್ನು ಹಾಕುತ್ತಿದೆ, ಆದ ಕಾರಣ ಪ್ರತಿಯೊಬ್ಬ ಪೋಷಕರು 9ತಿಂಗಳ ಮಗುವಿನಿಂದ 15ವರ್ಷದ ವಯೋಮಾನದ ಪ್ರತಿ ಮಗುವಿಗೂ ಲಸಿಕೆಗಳನ್ನು ಹಾಕಿಸುವುದು ಸೂಕ್ತ ಎಂದರು ಲಸಿಕಾ ಕಾರ್ಯಕ್ರಮದಲ್ಲಿ ಬಿಬಿಎಂಪಿ ಅಧಿಕಾರಿ ರಾಮಕೃಷ್ಣ ರೆಡ್ಡಿ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಮುಜೀಬ್, ಬಾಬು ರೆಡ್ಡಿ, ಉಮೇಶ್, ಆರೋಗ್ಯಾಧಿಕಾರಿ ಕಾಂತ್ ರಾಜು, ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಹಾಜರಿದ್ದದರು.