ಪುರಸಭೆ ಕಾಮಗಾರಿ ಹಣ ದುರುಪಯೋಗ – ತನಿಖೆಗೆ ಒತ್ತಾಯ

319

ದೇವನಹಳ್ಳಿ (ವಿಜಯಪುರ): ವಿಜಯಪುರ ಪಟ್ಟಣದ 16 ನೇ ವಾರ್ಡಿನ ಸತ್ಯಮ್ಮಕಾಲೋನಿಯಲ್ಲಿ ಪುರಸಭೆಯಿಂದ ನಿರ್ಮಾಣ ಮಾಡಿರುವ ಸಮುದಾಯ ಭವನಕ್ಕೆ ಸ್ಟೇರ್ ಕೇಸ್ (ಮೆಟ್ಟಿಲು) ಅಳವಡಿಸಲಾಗಿದೆ ಎಂದು 2 ಲಕ್ಷ ರೂಪಾಯಿಗಳು ಹಾಗೂ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದೆ ಎಂದು 4.90 ಲಕ್ಷ ರೂಪಾಯಿಗಳ ಅನುದಾನಗಳನ್ನು ಖರ್ಚು ಮಾಡಲಾಗಿದೆ ಎಂದು ಪುರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದು ಅನುದಾನಗಳು ಸಮರ್ಪಕವಾಗಿ ಉದ್ದೇಶಿತ ಕಾಮಗಾರಿಗಳಿಗೆ ಖರ್ಚಾಗಿರುವ ಈ ಬಗ್ಗೆ ಅನುಮಾನಗಳಿದ್ದು ಸೂಕ್ತ ತನಿಖೆಯಾಗಬೇಕು ಎಂದು ಆರ್,ಟಿ,ಐ,ಕಾರ್ಯಕರ್ತ ಶ್ರೀನಿವಾಸ್ ಒತ್ತಾಯಿಸಿದ್ದಾರೆ.

ವಿಜಯಪುರದ ಸತ್ಯಮ್ಮ ಕಾಲೋನಿ ರಸ್ತೆಯಲ್ಲಿ ಮರುಡಾಂಭರೀಕರಣವಾಗಿದೆ ಎಂದು ಸೂಚಿಸಲಾದ ಡಾಂಭರೀಕರಣವಾಗದ ರಸ್ತೆ.


ವಿಜಯಪುರದ ಸತ್ಯಮ್ಮ ಕಾಲೋನಿ ಬಳಿ ನಿರ್ಮಿಸಲಾದ ಸಮುದಾಯ ಭವನಕ್ಕೆ ಸ್ಟೇರ್ ಕೇಸ್(ಮೆಟ್ಟಿಲುಗಳನ್ನು)ಅಳವಡಿಸದಿರುವುದು.


ಪಟ್ಟಣದ 16 ನೇ ವಾರ್ಡಿನ ಸತ್ಯಮ್ಮ ಕಾಲೋನಿಯಲ್ಲಿ ಮಾತನಾಡಿದ ಅವರು, 2013-14 ನೇ ಸಾಲಿನಿಂದ 2016-17 ನೇ ಸಾಲಿನವರೆಗೆ 16 ನೇ ವಾರ್ಡಿಗೆ ಬಿಡುಗಡೆಯಾಗಿರುವ ಅನುದಾನಗಳು, ಎಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ, ಎಷ್ಟು ಕಾಮಗಾರಿಗಳು ಪ್ರಾರಂಭವಾಗಬೇಕು ಎಂದು ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದೆ. ಪುರಸಭೆಯಿಂದ ನೀಡಿರುವ ಮಾಹಿತಿಯಂತೆ 16 ನೇ ವಾರ್ಡಿನ ಸತ್ಯಮ್ಮ ಕಾಲೋನಿಯಲ್ಲಿ ನಿರ್ಮಾಣವಾಗಿರುವ ಸಮುದಾಯಭವನಕ್ಕೆ ಸ್ಟೇರ್ ಕೇಸ್ (ಮೆಟ್ಟಿಲು) ಅಳವಡಿಸಿಲ್ಲ. ಸತ್ಯಮ್ಮ ಕಾಲೋನಿಯಲ್ಲಿ ರಸ್ತೆಗೆ ಮರುಡಾಂಬರೀಕರಣ ಮಾಡಿರುವ ಕಾಮಗಾರಿ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಅವರು ನೀಡಿರುವ ಮಾಹಿತಿಯಂತೆ ಉದ್ದೇಶಿತ ಕಾಮಗಾರಿಗಳು ನಡೆದಿಲ್ಲ. ಆದ್ದರಿಂದ ಕಾಮಗಾರಿಗಳು ನಡೆದಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗಳಿಗೆ ದೂರು ನೀಡುತ್ತೇವೆ. ಸೂಕ್ತ ತನಿಖೆಯಾಗಬೇಕು ಇಲ್ಲವಾದರೆ ಪುರಸಭೆಯ ಮುಂಭಾಗದಲ್ಲಿ ಹೋರಾಟ ಮಾಡುತ್ತೇವೆ ಎಂದು ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಪುರಸಭೆಯಲ್ಲಿ ಕಳೆದ 2 ವರ್ಷಗಳಲ್ಲಿ ಇಂತಹ ಇನ್ನೆಷ್ಟು ಹಗರಣಗಳು ನಡೆದಿವೆಯೋ ಎಂಬುದರ ಬಗ್ಗೆ ಅನುಮಾನವಿದ್ದು, ಸಂಪೂರ್ಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದು, ಕಾಮಗಾರಿ ಪೂರ್ಣಗೊಂಡಿದೆ ಎಂದು ಸುಳ್ಳು ಮಾಹಿತಿ ಹಾಗೂ ಹಣ ಬಿಡುಗಡೆಗೊಳ್ಳಲು ಕಾರಣಕರ್ತರಾದ ಅಧಿಕಾರಿಗಳ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕೆಂದು, ಶ್ರೀನಿವಾಸ್ ಒತ್ತಾಯಿಸಿದರು.

ವಿಜಯಪುರದ ಸತ್ಯಮ್ಮ ಕಾಲೋನಿ ನಿವಾಸಿ ಶ್ರೀನಿವಾಸ್.