ಮಾನವ ಹಕ್ಕುಗಳ ಸಂರಕ್ಷಣೆಗೆ ಹೊಣೆಗಾರಿಕೆ ಅಗತ್ಯ

275

ಚಾಮರಾಜನಗರ:ಮನುಷ್ಯನಿಗೆ ಅತಿ ಅವಶ್ಯವಾಗಿರುವ ಮಾನವ ಹಕ್ಕುಗಳ ಅನುಷ್ಠಾನ ಹಾಗೂ ಸಂರಕ್ಷಣೆಗೆ ಅತಿ ಹೆಚ್ಚಿನ ಹೂಣೆಗಾರಿಕೆ ತೋರಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ತಿಳಿಸಿದರು.ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿಂದು ಮಾನವ ಹಕ್ಕುಗಳ ಆಯೋಗ, ಜಿಲ್ಲಾಡಳಿತ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ಸುಖ ಸಂತೋಷದ ಕಲ್ಪನೆಯಲ್ಲಿ ಇನ್ನೊಬ್ಬರಿಗೆ ದ್ರೋಹ ಮಾಡಬಾರದು. ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಬೇಕೆಂಬ ಸದಾಶಯ ಹೊಂದಿದೆ. ಅಸಮಾನತೆ ವಿರುದ್ಧ ಹೋರಾಡಬೇಕಿದೆ. ಮಾನವ ಹಕ್ಕುಗಳನ್ನು ಸಂರಕ್ಷಿಸಲು ಕಾಳಜಿವಹಿಸಬೇಕಿದೆ ಎಂದರು. ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅಧಿಕಾರಿ ವರ್ಗದ ಮೇಲೂ ಇದೆ. ಈ ನಿಟ್ಟಿನಲ್ಲಿ ಜನರಿಗೆ ಯಾವುದೇ ತೊಂದರೆಯಾಗದಂತೆ ನಿಗಾವಹಿಸಲಾಗುತ್ತದೆ. ಸೇವಾಮನೋಭಾವ, ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಾಗ ಸಹಜವಾಗಿ ಯಾರಿಗೂ ತೊಡಕು ಉಂಟು ಮಾಡದಂತೆ ಕಾರ್ಯನಿರ್ವಹಿಸಬಹುದೆಂದು ಹರೀಶ್‍ಕುಮಾರ್ ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸಂದೇಶ್.ವಿ.ಭಂಡಾರಿ ಅವರು ವಿಶ್ವಸಂಸ್ಥೆಯಲ್ಲಿ 1948ರಲ್ಲಿ ಸಾಮಾನ್ಯ ಸಭೆಯಲ್ಲಿ ಮಾನವ ಹಕ್ಕುಗಳ ಬಗ್ಗೆ ಚರ್ಚಿಸಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಯಿತು.ಇದರ ಅಂಗವಾಗಿಯೇ ವಿಶ್ವ ಮಾನವ ಹಕ್ಕುಗಳ ದಿನ ಆಚರಣೆಯನ್ನು ವಿಶ್ವದೆಲ್ಲಡೆ ಕೈಗೂಳ್ಳಲಾಗಿದೆ ಎಂದರು.

ಪ್ರಕೃತಿದತ್ತವಾಗಿ ಬಂದಿರುವ ಎಲ್ಲ ವಾತಾವರಣ ಅನುಭವಿಸುವ ಹಕ್ಕು ಮಾನವನಿಗಿದೆ. ಇಲ್ಲಿ ಯಾರೂ ಮೇಲು ಕೀಳು ಎಂಬ ಭೇದ ಭಾವವಿಲ್ಲ ಎಲ್ಲರೂ ಸಮಾನರಾಗಿದ್ದು ಇದರ ಪ್ರತಿಪಾದನೆಗಾಗಿಯೇ ಹಲವಾರು ಕಾನೂನುಗಳ ಜಾರಿಯಾಗಿವೆ. ಮಾನವ ಹಕ್ಕುಗಳ ರಕ್ಷಣೆ ಮಾಡುವ ಸಲುವಾಗಿಯೇ ಮಾನವ ಹಕ್ಕುಗಳ ಆಯೋಗ ಸಹ ಇದೆ ಎಂದು ನ್ಯಾಯಾಧೀಶರು ತಿಳಿಸಿದರು. ಮುಖ್ಯ ಉಪನ್ಯಾಸ ನೀಡಿದ ಮೈಸೂರು ಜೆ,ಎಸ್.ಎಸ್. ಕಾನೂನು ಕಾಲೇಜಿನ ಪ್ರೂ.ಕೆ.ಎಸ್.ಸುರೇಶ್ ಅವರು ಹುಟ್ಟಿನಿಂದಲೇ ಮಾನವನಿಗೆ ಹಕ್ಕುಗಳು ಸಹಜವಾಗಿ ಪ್ರಾಪ್ತವಾಗಲಿವೆ. ನಾಗರಿP ಹಾಗೂ ರಾಜಕೀಯ ಹಕ್ಕುಗಳು ದಕ್ಕಿವೆ. ಈ ಪೈಕಿ 30 ಪ್ರಮುಖ ಹಕ್ಕುಗಳಿದ್ದು ಅವುಗಳು ರಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.ಮಾನವ ಹಕ್ಕುಗಳು ಸಿಕ್ಕಿರುವುದರಿಂದ ಮಾನವನ ಅಂತಃಶಕ್ತಿ, ಪಾಂಡಿತ್ಯ, ಪ್ರತಿಭಗೆ ಅವಕಾಶ ಸಿಕ್ಕಿದೆ. ದೇಶದ ಪ್ರಗತಿಗೂ ಮಾನವ ಹಕ್ಕುಗಳು ಸಮರ್ಪಕವಾಗಿ ದಕ್ಕಿರುವುದೇ ಕಾರಣವಾಗಿದೆ ಎಂದು ಸುರೇಶ್ ಅವರು ಪ್ರತಿಪಾದಿಸಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಮಾತನಾಡಿ ಸ್ವಾತಂತ್ರ್ಯ ಪೂರ್ವದ ಬ್ರಿಟಿಷರ ಆಡಳಿತದಲ್ಲಿ ಭಾರತೀಯರಿಗೆ ಮಾನವ ಹಕ್ಕುಗಳು ಲಭಿಸಿರಲಿಲ್ಲ.ಅಂದು ತಾರತಮ್ಯದಿಂದ ನೋಡಲಾಗುತ್ತಿತ್ತು. ಇಂದು ಮಾನವ ಹಕ್ಕುಗಳು ದಕ್ಕಿದೆಯಾದರು ಇದರ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಾದ ಗುರುತರ ವ್ಯವಸ್ಥೆಯಾಗಬೇಕಿದೆ ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಮಾತನಾಡಿ ಸಾಮಾಜಿಕ ಆರ್ಥಿಕ ಕ್ಷೇತ್ರಗಳು ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಹಕ್ಕುಗಳು ಪ್ರತಿಪಾದನೆಯಾಗುತ್ತಿವೆ. ವಿಶೇಷವಾಗಿ ಮಹಿಳೆಯರು ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರತಿನಿಧಿಸುತ್ತಿದ್ದು ತಮ್ಮ ಹಕ್ಕುಗಳ ಇರುವಿಕೆಯನ್ನು ಪರಿಪೂರ್ಣವಾಗಿ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸನ ಪತ್ರ ವಿತರಿಸಲಾಯಿತು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಡಿ.ವೈ.ಎಸ್.ಪಿ. ಪುಟ್ಟಮಾದಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.