ಉದ್ಘಾಟನೆಗಾಗಿ ಸಿದ್ದವಾದ ವಸತಿ ಶಾಲೆ

785

ಮಂಡ್ಯ/ಮಳವಳ್ಳಿ: 15 ಕೋಟಿ ರೂ ವೆಚ್ಚದ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ ಕೇವಲ ಒಂದು ವರ್ಷದಲ್ಲಿ ಕಟ್ಟಡಗಳು ಪೂರ್ಣ ಗೊಂಡು ಉದ್ಘಾಟನೆಗಾಗಿ ಸಿದ್ದವಾಗಿದೆ.

ಮಳವಳ್ಳಿ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ಬಳಿ ಕಳೆದ ವರ್ಷ ಡಿ 24 ರಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ರವರು ಗುದ್ದಲಿಪೂಜೆ ನೇರಿಸಿದ್ದರು. ಈಗಾಗಲೇ 8 ಕಟ್ಟಡಗಳ ಈ ವಸತಿಶಾಲೆ ಜಿಲ್ಲೆಗೆ ಪ್ರಥಮವಾಗಿದ್ದು, ಅದರಲ್ಲೂ ಗ್ಯಾರ್ನೆಟ್ ಆಳವಡಿಸಿದ್ದು, ಸುಸಚ್ಚಿತ ಅಡುಗೆ ಮನೆ, ವಸತಿಶಾಲೆ, ಕ್ರೀಡಾಂಗಣ, ಪಾಕ್೯, ಸೇರಿದಂತೆ ಹೆಣ್ಣುಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸಕ್ಕಾಗಿ ಸರ್ಕಾರದಿಂದ ಉಚಿತವಾಗಿ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆ , ಈಗಾಗಲೇ 2009 ರಲ್ಲಿ ಮಳವಳ್ಳಿ ಪಟ್ಟಣದಲ್ಲಿ ಅಧಿಕೃತವಾಗಿ ಪ್ರಾರಂಭವಾಗಿದ್ದು, ಸ್ವಂತ ಕಟ್ಟಡದಲ್ಲಿ ಇನ್ನೂ‌ಎರಡು ತಿಂಗಳನಲ್ಲಿ ಶಾಲೆ ಪ್ರಾರಂಭವಾಗಲಿದೆ, ಎನ್ನುತ್ತಾರೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಶಿವಕುಮಾರ್. ಜಿಲ್ಲೆಯಲ್ಲಿ ಪ್ರಥಮವಾಗಿ ವಸತಿಶಾಲೆ ಅದರಲ್ಲೂ ತ್ವರಿತ ವಾಗಿ ಪೂರ್ಣವಾಗುತ್ತಿದ್ದು ಇದರ ಕೀರ್ತಿ ಶಾಸಕ ಪಿ.ಎಂ ನರೇದ್ರಸ್ವಾಮಿಗೆ ಸಲ್ಲುತ್ತದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಶೈಕ್ಷಣಿಕ ವಾಗಿ ಹಿಂದುಳಿದ್ದು.ನಂಜುಂಡಪ್ಪ ಆಯೋಗದ ವರದಿ ಮೇರೆಗೆ ಸರ್ಕಾರ ಅನುದಾನ ನೀಡಿದ್ದು, ಹೆಣ್ಣುಮಕ್ಕಳು ಶೈಕ್ಷಣಿಕವಾಗಿ ಮುಂದುವರಿಸಲು ಇಂದು ಈ ಶಾಲೆ ಪ್ರಾರಂಭಿಸಿದ್ದು, ಖಾಸಗಿ ಶಾಲೆಯ ಹಾವಳಿ ತಪ್ಪಿಸಲು ನಮ್ಮಶಾಸಕರು ಕ್ರಮಕೈಗೊಂಡಿರುವುದು ಉತ್ತಮ ಬೆಳವಣಿಗೆ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಸದಸ್ಯ ವಡ್ಡರಹಳ್ಳಿನಾಗೇಶ್. ಒಟ್ಟಿನಲ್ಲಿ ತಾಲ್ಲೂಕಿನಲ್ಲಿ ಶಿಕ್ಷಣದ ಬಗ್ಗೆ ಎಷ್ಟು ಕಾಳಜಿ ಎನ್ನುವುದು ಇದೇ ಸಾಕ್ಷಿಯಾಗಿದೆ

ವರದಿ. ಮಳವಳ್ಳಿ ಲೋಕೇಶ್ ನಮ್ಮೂರುಟಿವಿ