ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತಾಯ

198

ವಿಜಯಪುರ-ಸಿಂದಗಿ: ಸಿಂದಗಿ ಪಟ್ಟಣದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತಾಯ

ಸಿಂದಗಿ ಪಟ್ಟಣದಲ್ಲಿನ ಬಿದಿ ದೀಪಗಳು ಬೆಳಗುವಂತೆ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಸೋಮವಾರ ಪಟ್ಟಣದ ಪುರಸಭೆ ಎದುರು ಜಯಕರ್ನಾಟಕ ಯುವ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಂತರ ಪ್ರತಿಭಟನಾಕಾರರು ಮುಖ್ಯಾಧಿಕಾರಿ ರಮೇಶ ಇಮ್ಮನದ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ ಜಯ ಕರ್ನಾಟಕ ಯುವ ಘಟಕ ಜಿಲ್ಲಾಧ್ಯಕ್ಷ ಸುದರ್ಶನ ಜಿಂಗಣ್ಣಿ, ಜಿಲ್ಲಾ ಉಪಾಧ್ಯಕ್ಷ ನಿಂಗರಾಜ ಬಗಲಿ ಅವರು ಮಾತನಾಡಿ, ಪಟ್ಟಣದಲ್ಲಿನ ಬಿದಿ ದೀಪಗಳು ಉರಿಯುತ್ತಿಲ್ಲ. ಅಲ್ಲಲ್ಲಿ ಕಸದ ರಾಸಿಗಳು ಕಂಡು ಬರುತ್ತಿವೆ ಆದ್ದರಿಂದ ಬಿದಿ ದೀಪಗಳು ಶಿಘ್ರದಲ್ಲಿ ದುರಸ್ತಿ ಮಾಡಿ ಬೆಳಗುವಂತೆ ಮಾಡಬೇಕು. ಕಸದ ರಾಸಿಗಳನ್ನು ಬೆರೆ ಸ್ಥಳಕ್ಕೆ ಸಾಗಾಣಿಕೆ ಮಾಡಬೇಕು. ಬಿದಿ ವ್ಯಾಪಾರಸ್ಥರಿಗೆ ಸ್ಥಳ ನಿಗದಿ ಪಡೆಸಬೇಕು ಪೌರ ಕಾರ್ಮಿಕರಿಗೆ ಸೇವಾ ಭದ್ರತೆ ನೀಡಬೇಕು ಇಲ್ಲದ ಪಕ್ಷÀಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ ಎಂದು ಎಚ್ಚರಿಕೆ ನೀಡಿದರು.
ಜಯ ಕರ್ನಾಟಕ ಯುವ ಘಟಕದ ತಾಲೂಕಾ ಅಧ್ಯಕ್ಷ ಮಲ್ಲಿಕಾರ್ಜುನ ನಾಟಿಕಾರ, ಮೃತ್ಯಂಜಯ ಬಾನಕದಿನ್ನಿ, ಸುನೀಲ ಕಟ್ಟಿಮನಿ, ಸಚೀನ ಚಿಗರಿ, ಸಂತೋಷ ನಾಟಿಕಾರ, ಕುಮಾರ ಸಿಂದಗಿ, ಮಾಂತೆಶ ಪೂಜಾರಿ, ರಾಕೇಶ ಬಾಣಿಕೊಲ,ಲೊಕೇಶ ಹಿಟ್ನಳ್ಳಿ, ಸಂತೋಷ ಚಂದಾನವರ, ಸಮೀರ ಗುಂದಗಿ, ಬೀಮು ಕಾಂಬಳೆ, ವಿಜಯಕುಮಾರ ರೆಡ್ಡಿ, ಸುರೇಶ ವಾಲಿಕಾರ, ಚಂದ್ರು ಸುಲ್ಪಿ, ಮಂಜುನಾಥ ಚೌವ್ಹಾಣ, ಅಂಬರೀಶ ನಿಂಬಾಳಕರ, ಚಂದ್ರು ದೊಡಮನಿ ಸೇರಿದಂತೆ ಇತರರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.

ವರದಿ: ನಮ್ಮೂರು ಟಿವಿ ನಂದೀಶ ಹಿರೇಮಠ ಸಿಂದಗಿ