ಬೆಳೆಹಾನಿಗೆ ರೈತ ಆತ್ಮಹತ್ಯೆ

195

ರಾಯಚೂರು/ಸಿಂಧನೂರು: ತಾಲುಕಿನ ನಂಜಲದಿನ್ನಿ ಗ್ರಾಮದ ವೀರೇಶ ತಂದೆ ಯಂಕೋಬಣ್ಣ ನಾಯಕ ಎನ್ನುವ (೩೦) ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತನ್ನ ಏಳು ಎಕರೆ ಜಮೀನಿನಲ್ಲಿ ಬಿತ್ತಿದ್ದ ಬೆಳೆ ಕಳೆದ ಬಾರಿಯೂ ಕೈಕೊಟ್ಟಿತ್ತು. ಈ ಹಂಗಾಮಿನಲ್ಲೂ ನಾಟಿ ಮಾಡಿದ ಫಸಲೆಲ್ಲಾ ವಿಪರೀತ ಹವಾಮಾನ ವೈಪರೀತ್ಯಗಳಿಂದ ಹಾಳಾಗಿದೆ. ಇದರಿಂದ ಕಂಗಾಲಾದ ರೈತ ಆತ್ಮ ಹತ್ಯೆಯ ದಾರಿ ಹಿಡಿದಿದ್ದಾನೆ.
ಕೃಷಿಗಾಗಿ ಮಾಡಿದ್ದ ಸಾಲ ತೀರಿಸಲಾಗದೇ ರೈತ ಕೆಲದಿನಗಳಿಂದ ಮಂಕಾಗಿದ್ದ ಎನ್ನಲಾಗಿದೆ.
ನಿನ್ನೆ ರಾತ್ರಿ ವಿಷಕುಡಿದು ಚಿಂತಾಜನಕ ಸ್ಥಿತಿಯಲ್ಲಿದ್ದ ರೈತನನ್ನು ಆಸ್ಪತ್ರೆಗೆ ಸೇರಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ.
ಕಂದಾಯ ಅಧಿಕಾರಿಗಳು ನಂಜಲದಿನ್ನಿ ಗ್ರಾಮಕ್ಕೆ ಬೇಟಿ ನೀಡಿದ್ದು ಸರಕಾರಕ್ಕೆ ವರದಿ ಸಲ್ಲಿಸುವದಾಗಿ ಹೇಳಿದ್ದಾರೆ.