ಎರಡು ಗುಂಪುಗಳ ಮಧ್ಯೆ ಮಾರಾಮಾರಿ.

220

ವಿಜಯಪುರ:ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದ ಘಟನೆ ವಿಜಯಪುರದಲ್ಲಿ ನಡೆದಿದೆ. ನಗರದ ಹೊರವಲಯದ ಹರಿಯಾಣ-ರಾಜಾಸ್ಥಾನ ಡಾಬಾದಲ್ಲಿ ಮಾರಾಮಾರಿ ನಡೆದಿದ್ದು, ಘರ್ಷಣೆ ವೇಳೆ ಡಾಬಾ ಮಾಲೀಕ ಮಹ್ಮುದ ಎಂಬಾತನಿಗೂ ಕಿಡಗೇಡಿಗಳು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಮಹ್ಮುದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗಲಾಟೆಯಲ್ಲಿ ಊಟಕ್ಕೆ ಬಂದಿದ್ದ ಗ್ರಾಹಕರ ಮೇಲು 15 ಜನರ ಗುಂಪು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಇನ್ನು ಡಾಬಾದಲ್ಲಿ ಅಳವಡಿಸಿದ್ದ ಸಿಸಿಟಿವಿ ಹಾರ್ಟ್ ಡಿಸ್ಕ್ ನ್ನು ಕಿಡಗೇಡಿಗಳು ತಗೆದುಕೊಂಡು ಪರಾರಿಯಾಗಿದ್ದಾರೆ. ಗಲಾಟೆಯಲ್ಲಿ ಸುಮಾರು 20 ಸಾವಿರಕ್ಕಿಂತ ಹೆಚ್ಚು ಡಾಬಾದ ವಸ್ತುಗಳು ಡ್ಯಾಮೇಜ್ ಆಗಿದ್ದು, ಸ್ಥಳಕ್ಕೆ ಗೋಲಗುಂಬಲ್ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…

ವರದಿ: ನಮ್ಮೂರು ಟಿವಿ ನಂದೀಶ