ಹಿಂದೂಗಳ ಹತ್ಯೆಗೆ ಸರ್ಕಾರದಿಂದ ಜಿಹಾದಿಗಳಿಗೆ ಸುಪಾರಿ..

212

ತುಮಕೂರು/ಹುಳಿಯಾರು: ರಾಜ್ಯದಲ್ಲಿ ಕಳೆದ 4 ವರ್ಷಗಳಿಂದ ಇಪ್ಪತ್ತಕ್ಕೂ ಹೆಚ್ಚು ಹಿಂದೂಗಳ ಹತ್ಯೆಯಾಗಿದ್ದು ಕನಿಷ್ಠ ಒಬ್ಬ ಅಪರಾಧಿಯನ್ನೂ ಬಂಧಿಸದ ಸರ್ಕಾರದ ನಡೆ ಗಮನಿಸಿದರೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗೆ ಸರ್ಕಾರವೇ ಸುಪಾರಿ ಕೊಟ್ಟಿರುವ ಅನುಮಾನ ಕಾಡುತ್ತಿದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಗಂಭೀರ ಆರೋಪ ಮಾಡಿದರು.ಹುಳಿಯಾರಿನಲ್ಲಿ ಮಂಗಳವಾರ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಹತ್ಯೆ ಖಂಡಿಸಿ ಬಿಜೆಪಿಯಿಂದ ಏರ್ಪಡಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಳೆದ ವರ್ಷ ಟಿಪ್ಪು ಜಯಂತಿ ಬೇಡವೆಂದರೂ ಸರ್ಕಾರ ಆಚರಿಸಿ ಕುಟ್ಟಪ್ಪನ ಬಲಿ ಪಡೆಯಿತು. ಈ ವರ್ಷ ಸಹ ಬೇಡವೆಂದರೂ ಮುಂದುವರಿಸಿದ ಸರ್ಕಾರ ಹನುಮಜಯಂತಿ ಆಚರಣೆಗೆ ತಡೆಯೊಡ್ಡಿದರು. ಮುಸಲ್ಮಾನರು ಡಿಜೆ ಹಾಕಲು ಅನುಮತಿ ಕೊಟ್ಟು ಹಿಂದೂಗಳು ಗಂಟೆಯೊಡೆಯುವುದನ್ನು ನಿಲ್ಲಿಸಿದರು. ಹೀಗೆ ರಾಜ್ಯ ಸರ್ಕಾರ ಹಿಂದೂಗಳ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಈಗಲೂ ಖಂಡಿಸದೆ ಕೈ ಕಟ್ಟಿ ಕುಳಿತುಕೊಂಡರೆ ಹಿಂದೂಗಳು ಷಂಡರೆನ್ನುತ್ತಾರೆ ಎಚ್ಚರ ಎಂದರು.ಹಿಂದೂಗಳ ಮೇಲಿನ ದೌರ್ಜನ್ಯ ಜಮ್ಮು-ಕಾಶ್ಮೀರದಿಂದ, ಕೇರಳಕ್ಕೆ ಬಂದು, ಕೇರಳದಿಂದ ಮಂಗಳೂರಿಗೆ ಬಂದಿದ್ದು ಈಗ ಹುಳಿಯಾರಿಗೂ ಬಂದಿದೆ. ಇದಕ್ಕೆ ಇಲ್ಲಿನ ಹಿಂದೂಗಳ ಶ್ರದ್ಧಾಕೇಂದ್ರವಾದ ಆಂಜನೇಯಸ್ವಾಮಿ ದೇವಸ್ಥಾನ ಬಸವಣ್ಣನನ್ನು ಕೊಂದಿರುವುದು ನಿದರ್ಶನವಾಗಿದೆ. ಒಂದರ್ಥದಲ್ಲಿ ಹಿಂದೂ ವಿರೋಧಿಗಳ ಜಾಲ ವ್ಯವಸ್ಥಿತವಾಗಿ ಹುಳಿಯಾರಿನಲ್ಲಿ ಹರಡುತ್ತಿದೆ. ಇದರ ವಿರುದ್ಧ ಹಿಂದೂಗಳು ಜಾಗೃತರಾಗಿ ಸಂಘಟಿತರಾಗಬೇಕಿದೆ. ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು ಆರೋಪಿಗಳನ್ನು ಪತ್ತೆಯಚ್ಚದಿದ್ದರೆ ಉಗ್ರ ಪತಿಭಟನೆಗೆ ಹಿಂದೂಗಳು ಸಜ್ಜಾಗಬೇಕಿದೆ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಕೆಂಕೆರೆನವೀನ್, ಗ್ರಾಪಂ ಸದಸ್ಯ ಯಳನಾಡು ದಯಾನಂದ್, ಕಾಯಿಕುಮಾರ್, ಮಾಜಿ ಸದಸ್ಯರುಗಳಾದ ರಾಮಣ್ಣ, ಪ್ರಕಾಶ್, ಕೃಷ್ಣಮೂರ್ತಿ, ಯುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂತೋಷ್, ಆಂಜನೇಯಸ್ವಾಮಿ ದೇವಸ್ಥಾನ ಸಮಿತಿಯ ಧನಂಜಯ್ಯ, ಕೆಎಂಎಲ್ ಮೂರ್ತಿ, ಪಾತ್ರೆ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.