ಬಹುತೇಕ ಬಂದ್ ಯಶಸ್ವಿ…

260

ವಿಜಯಪುರ/ಸಿಂದಗಿ:ಶಾಲಾ ಬಾಲಕಿ ದಾನಮ್ಮಳನ್ನು ಅತ್ಯಾಚಾರ ವೆಸಗಿ ಕೊಲೆ ಮಾಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿ ತಾಲೂಕಿನ ವಿವಿಧ ಸಂಘಟನೆಗಳು ಶನಿವಾರ ಕರೆ ನೀಡಿದ ಬಂದಗೆ ಪಟ್ಟಣದಲ್ಲಿ ವ್ಯಾಪಕ ಬೆಂಬಲ ದೊರತಿದ್ದು ಬಂದ ಸಂಪೂರ್ಣ ಯಶಸ್ವಿಯಾಗಿದೆ.ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ದರು, ರಸ್ತೆಯ ಬದೀಯ ವ್ಯಾಪಾರ ಸ್ಥಗಿತಗೊಂಡಿದ್ದವು. ಇದರಿಂದ ನಿತ್ಯ ಜನಜಂಗೂಳಿಯಿಂದ ಕೂಡಿರುವ ಬಸ್ ನಿಲ್ದಾಣ, ಟಿಪ್ಪು ವೃತ್ತ, ಸಬವೇಶ್ವರ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ ಸೇರಿದಂತೆ ಅನೇಕ ವೃತ್ತಗಳು ಜನರಿಲ್ಲದೆ ಬೀಕೊ ಎನ್ನುತ್ತಿದ್ದವು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ನಿಲ್ದಾಣ ಬಣಗುಡುತ್ತಿತ್ತು. ಆಸ್ಪತ್ರೆಗಳು, ಔಷಧಿ ಅಂಗಡಿಗಳು ಸ್ವಯಂ ಪ್ರೇರಣೆಯಿಂದ ಬಂದಾಗಿರುವ ಕಾರಣ ರೋಗಿಗಳು ಮಧ್ಯಾನ್ಹ್ 3 ಗಂಟೆಯರೆಗೆ ಚಿಕಿತ್ಸೆಗಾಗಿ ಪರಿತಪಿಸುವಂತಾಗಿತ್ತು. ಪ್ರತಿಭಟನೆಯಲ್ಲಿ ಭಾಗಹಿಸಿದ ಪ್ರತಿಭಟನಾಕಾರರಿಗೂ ನೀರು ಸಿಗದಾಗಿತ್ತು ದಾಹವನ್ನು ಲೆಕ್ಕಿಸದೆ ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಲೂಕಿನ ವಿವಿಧ ದಲಿತಪರ, ಕನ್ನಡಪರ, ರೈತಪರ, ಕಾನೂನು ರಕ್ಷಣಾ ವೇದಿಕೆ, ಶ್ರೀರಾಮ ಸೇನೆ, ಎಬಿವ್ಹಿಪಿ, ವಿಶ್ವಹಿಂದೂ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಮಹಿಳಾ ಸಂಘಟನೆಗಳು, ಸ್ವಸಾಹಾಯ ಸಂಘಗಳು, ರಾಷ್ಟ್ರೀಯ ಬಸವ ದಳ, ಮಹಿಳಾ ಜನ ಜಾಗೃತ ವೇದಿಕೆ, ಅನೇಕ ಪಕ್ಷಗಳು ಮತ್ತು ಮುಖಂಡರು, ನ್ಯಾಯವಾಧಿಗಳ ಸಂಘ, ಪ್ರಗತಿಪರ ಚಿಂತಕರು, ವೈದ್ಯಕೀಯ ಸಂಘ, ಎಸ್‍ಡಿಪಿಆಯ್, ಟಿಪ್ಪು ಸುಲ್ತಾನ ಸೇನೆ, ಎಸ್‍ಎಫ್‍ಆಯ್, ಎಆಯ್‍ಎಮ್‍ಆಯ್‍ಎ, ಅನೇಕ ಒಕ್ಕೂಟಗಳು, ಹಣ್ಣು ಹಾಗೂ ತರಕಾರಿ ಮಾರಾಟಗಾರರ ಸಂಘ, ವಿವಿಧ ವ್ಯಾಪಾರಸ್ಥರ ಸಂಘ, ವಿವಿಧ ಶಾಲಾ ಕಾಲೇಜುಗಳ ಉಪನ್ಯಾಸ ಮತ್ತು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಸ್ಕರಿಸಿ ಭಾಗವಹಿಸಿದ್ದರು, ಸಮತಾ ಸೈನಿಕ ದಳ, ಮಾಜಿ ಸೈನಿಕರ ವೇದಿಕೆ, ಭೀಮಾ ಫೌಂಡೇಷನ್, ಮಾತಂಗಾ ಯುತ್ ಫೌಂಡೇಷನ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಸಾವಿರಾರು ಕಾರ್ಯಕರ್ತರು ಒಕ್ಕೊರಲಿನಿಂದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾನವೀಯತೆ ಮೆರೆದರು ನಂತರ ಟೈಯರಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದರು.
ಬೆಳಗ್ಗೆ 10 ಗಂಟೆಗೆ ಸ್ಥಳಿಯ ಅಂಬೇಡ್ಕರ ವೃತ್ತದಲ್ಲಿ ಸಾವಿರಾರು ಜನ ಜಮಾಯಿಸಿದ್ದರು. ಬಾಳು ಕಟ್ಟುವ ಮುನ್ನಾ ಶಾಲೆ ತೊರೆಯುವ ಮುನ್ನಾ ಬಾಳು ಮುಗಿಯಿತು ತಂಗಿ. ನನ್ನ ಪ್ರತೀಯ ತಂಗಿ ದಾನಮ್ಮ ಎಂಬ ಕ್ರಾಂತಿ ಗೀತೆಯೊಂದಿಗೆ ಪ್ರತಿಭಟನಾಕಾರರು ಪ್ರತಿಭಟನೆಗೆ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಅನೇಕರು ಮಾತನಾಡಿ, ಇದೊಂದು ಹೇಯ ಕೃತ್ಯ ಬಸವಣ್ಣನ ನಾಡಿನಲ್ಲಿ ಇಂತದೊಂದು ದುರಂತ ಆಗಬಾರದಾಗಿತ್ತು. ಸ್ವಾತಂತ್ರ್ಯ ಸಿಕ್ಕಾಗಿನಿಂದ ದಲಿತರ ಮೇಲೆ ಅನೇಕ ದೌರ್ಜನ್ಯಗಳು ಆಗುತ್ತಲಿವೆ. ಹಾಡು ಹಗಲೆ ಇಂತಾ ದುರಂತಗಳು ನಡೆಯುತ್ತಿದ್ದರು ಪೋಲಿಸ ಇಲಾಖೆ ಮೌನಕ್ಕೆ ಶರಣಾಗುತ್ತಿದೆ. ಕೇಲ ಪೋಲಿಸ ಅಧಿಕಾರಿಗಳು ಪ್ರಕರಣದ ಮಾರ್ಗವನ್ನು ಬದಲಿಸುತ್ತಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ವೆಸಗಿ ಹತ್ಯೆ ಮಾಡಿರುವ ಘಟನೆ ನಾಗರೀಕ ಸಮಾಜ ತೆಲೆ ತಗ್ಗಿಸುವಂತಾಗಿದೆ. ಈ ಕೃತ್ಯವನ್ನು ಪ್ರತಿಯೊಬ್ಬರು ಖಂಡಿಸಲೆಬೇಕು. ಕರ್ನಾಟಕದಲ್ಲಿ ಇಂತಾ ಪ್ರಕರಣ ಮೊತ್ತೊಮ್ಮೆ ಮರುಕಳಿಸದಂತೆ ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು. ಆರೋಪಿಗಳನ್ನು ಕೂಡಲೆ ಬಂಧಿಸಿ ಅವರಿಗೇ ಜೀವಾವಧಿ ಶಿಕ್ಷೆಗೆ ಗುರಿ ಪಡಿಸಬೇಕು ಎಂದ ಅವರು ಮೃತಳ ಕುಟುಂಬಕ್ಕೆ ಸೂಕ್ತ ರೀತಿಯ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಅಂಬೇಡ್ಕರ ವೃತ್ತದಿಂದ ಪ್ರಾರಂಭಗೊಂಡು ಟಿಪ್ಪು ಸುಲ್ತಾನ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ, ಬಸವೇಶ್ವರ, ಸಂಗೋಳ್ಳಿ ರಾಯಣ್ಣ ವೃತ್ತ, ಅಂಬಿಗೆ ಚೌಡಯ್ಯ ವೃತ್ತದಿಂದ ಸಾಗಿ ಮತ್ತೇ ಅಂಬೇಡ್ಕರ ವೃತ್ತದಲ್ಲಿ ತಹಶೀಲ್ದಾರ ಬಿ.ಎಸ್.ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಶಾಸಕ ರಮೇಶ ಭೂಸನೂರ, ಮಾಜಿ ಸಚಿವ ಎಂ.ಸಿ.ಮನಗೂಳಿ, ವಿಠ್ಠಲ ಕೊಳ್ಳೂರ, ಚನ್ನು ವಾರದ, ಬಾಷಾಸಾಬ ತಾಂಬೋಳಿ, ವಾಯ್.ಸಿ.ಮಯೂರ, ಶ್ರೀಕಾಂತ ಸೋಮಜ್ಯಾಳ,ಎಮ್.ಎನ್.ಕಿರಣರಾಜ, ಹುಯೋಗಿ ತಲ್ಲೋಳ್ಳಿ, ಚಂದ್ರಕಾಂತ ಸಿಂಗೆ, ಪ್ರಧಾನಿ ಮೂಲಿಮನಿ, ಅಶೋಕ ಸುಲ್ಪಿ, ರಾವುತ ತಳಕೇರಿ, ಶ್ರೀಮಂತ ಚೌರ, ಎಸ್.ಬಿ.ಚೌಧರಿ, ಗೋಪಿ ಬಡಿಗೇರ, ಶರಣು ಸಿಂಧೆ, ಡಾ.ಅರವಿಂದ ಮನಗೂಳಿ, ಸತೀಶ ಪಾಟೀಲ, ಎಮ್.ಎಸ್.ಹೈಯಾಳಕರ, ಉಮೇಶ ಕೋಳೆಕರ, ಸುದರ್ಶನ ಜಿಂಗಾಣಿ, ನಿಂಗರಾಜ ಅತನೂರ, ಪರುಷರಾಮ ಕಾಂಬಳೆ, ನಿಂಗು ಬಗಲಿ, ರಾಕೇಶ ಮಠ, ನವೀನ ಲೋಣಿ, ಶ್ರೀಶೈಲ ಮುಳಜಿ, ಸದ್ದಾಮ ಆಲಗೂರ, ಸಲೀಂ ಅಲ್ದಿ, ಗುರು ತಾರಾಪೂರ, ಮಲ್ಲು ಗತ್ತರಗಿ, ಸಂತೋಷ ಮಣಗಿರಿ, ಶ್ರೀಕಾಂತ ಬಿಜಾಪೂರ, ಶ್ರೀಶೈಲ ಚಳ್ಳಗಿ, ಮಹಾಂತೇಶ ಸಾತಿಹಾಳ, ಸಂದೀಪ ಚೌರ, ಎಂ.ಎನ್.ಪಾಟೀಲ, ಮಲ್ಲಿಕಾರ್ಜುನ ಶಂಬೇವಾಡ, ಭೀಮನಗೌಡ ಬಿರಾದಾರ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು.

ಪ್ರಯಾಣಿಕರು ಮತ್ತು ಶಿಕ್ಷಕರ ಪರದಾಟ- ಸಿಂದಗಿ ಬಂದ ಕರೆ ನೀಡಿದ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 218 ರಿಂದ ಸುಮಾರು 2 ಕೀಮಿದೂರದ ವರೆಗೆ ಮಕ್ಕಳನ್ನು ಕಂಕುಳಲ್ಲಿ ಎತ್ತಿಕೊಂಡು ಅನೇಕ ಬರುವಂತ ದೃಶ್ಯಗಳು ಸಾಮಾನ್ಯವಾಗಿದ್ದವು. ಶನಿವಾರವಾಗಿರುವ ಕಾರಣ ಶಾಲೆಗಳು ಮುಂಜಾನೆ 7.30 ಗಂಟೆಗೆ ಪ್ರಾರಂಭವಾಗುತ್ತವೆ ಎಂದು ಶಾಲೆಗೆ ಹೋಗುವ ಶಿಕ್ಷಕರು ಬಸ್ಸಿಲ್ಲದೆ ಮನೆಗೆ ಮರಳಿದ ಪ್ರಸಂಗ ನಡೆದಿವೆ.

ನಮ್ಮೂರು ಟಿವಿ ನಂದೀಶ ಹಿರೇಮಠ ಸಿಂದಗಿ-9880624377