ಭಾರತದ ಚೇತನರಿಗೆ ಕ್ಷೀರಾಭಿಷೇಕ:

211

ವಿಜಯಪುರ/ಸಿಂದಗಿ:ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪಂಚಲೋಹದ ಮೂತಿ೯ಗೆ ಡಾ. ಶಾಂತವೀರ ಮನಗೂಳಿ ಅವರು ಕ್ಷಿರಾಭಿಷೇಕ ಮಾಡಿ ಪೂಜೆ ಸಲ್ಲಿಸಿದರು.ಅವರು ಪಟ್ಟಣದ ಆಝಾದ್ ಯುವ ವೇದಿಕೆ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ, ಉದಮ್ ಸಿಂಗ್, ಸುಭಾಷಚಂದ್ರ ಬೋಸರ ಜಯಂತೋತ್ಸವ ನಿಮಿತ್ತ ನಿಮಿ೯ಸಲಾದ 56 ಫೂಟ್ ಎತ್ತರದ ಕ್ರಾಂತಿಕಾರಿ ಹೋರಾಟಗಾರರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಸಲ್ಲಿಸಿದರು…

ವೇದಿಕೆಯಲ್ಲಿ ಶಂಕರಲಿಂಗಯ್ಯ ಮಠ ಬಂದಾಳ ಅಧ್ಯಕ್ಷತೆ ವಹಿಸಿದ್ದರು. ಶರಣಯ್ಯ ಮಠ, ಅಶೋಕ ನೇಗಿನಾಳ, ನೀಲಕಂಠ ರಬಶೆಟ್ಟಿ, ಬಸವರಾಜ ಭಜಂತ್ರಿ, ಮಾಂತೇಶ ಅಗಸರ, ಭೀಮನಗೌಡ ಬಿರಾದಾರ, ಶರಣು ತಳವಾರ, ಪ್ರಶಾಂತ ಸಿಂದಗಿ, ಪ್ರಕಾಶ ಅಲ್ಲಾಪೂರ, ಅನೀಲ ಪೂಜಾರಿ, ಅನೀಲ ಗುಡ್ಯಾಳ, ಸುನೀಲ ಶಿರಕನಹಳ್ಳಿ ಹಾಗೂ ದೇಶಾಭಿಮಾನಿ ಕಾಯ೯ಕತ೯ರು ಇದ್ದರು..

ನಮ್ಮೂರು ಟಿವಿ ನಂದೀಶ ಹಿರೇಮಠ ಸಿಂದಗಿ: