ಯುವ ಸೌರಭ ಕಾರ್ಯಕ್ರಮ ಮತ್ತು ಕವಿಗೋಷ್ಠಿ..

324

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ವಿದ್ಯಾಗಣಪತಿ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಆಶ್ರಯದಲ್ಲಿ ಯುವ ಸೌರಭ ಕಾರ್ಯಕ್ರಮ ಮತ್ತು ಕವಿಘೋಷ್ಟಿ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೆಂಕಟಾಚಲಪತಿ ಅವರ ಸಹಯೋಗದೊಂದಿಗೆ ನಗರದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಗೀತ ,ನಾಟಕ ,ಜಾನಪದ ಸಂಗೀತದ ರಸದೌತಣವನ್ನು ವಾರದ ಕೊನೆಯಲ್ಲಿ ನಗರದ ಜಾನಪದ ಪ್ರಿಯರಿಗೆ ಉಣಬಡಿಸಿದರು.

ಈ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು ಮಾತನಾಡಿದ ಕರಕುಶಲ ಅಭಿವೃದ್ಧಿ ನಿಗಮ ಮಂಡಳಿಯ ಅದ್ಯಕ್ಷರಾದ ವಾಣಿಕೃಷ್ಣಾರೆಡ್ಡಿ ಮುಂದಿನ ಪೀಳಿಗೆಗೆ ಜಾನಪದ ,ಸಂಗೀತ ,ಸಂಸ್ಕೃತಿಯನ್ನು ಕೊಂಡೊಯ್ಯಲು ಇಂತಹ ಕಾರ್ಯಗಳನ್ನು ಮಾಡುವುದು ತುಂಬಾ ಸೂಕ್ತ ಎಂದು ಹೇಳಿದರು. .
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಣ ,ಎನ್ ವೆಂಕಟೇಶ್, ನರೇಂದ್ರ ,ಜಿಲ್ಲಾದ್ಯಕ್ಷ ಕೈವಾರ ಶ್ರೀನಿವಾಸ್ ,ಗೊಲ್ಲಹಳ್ಳಿ ,ಶಿವ ಪ್ರಸಾದ,ಎನ್ ಅಂಬರೀಶ್ ,ಕುರುಟಹಳ್ಳಿ ರಾಮಕೃಷ್ಣ, ಸೀತಮ್ಮ ಮತ್ತಿತರರು ಉಪಸ್ಥಿತಿಯಿದರು.