ಯುವ ರೈತ ನೇಣಿಗೆ ಶರಣು..

194

ಮಂಡ್ಯ/ಮಳವಳ್ಳಿ:ಸಾಲಬಾಧೆ ತಾಳಲಾರದೆ ಯುವ ರೈತ ನೊಬ್ಬ ನೇಣಿಗೆ ಶರಣನಾದ ಘಟನೆ.ಮಳವಳ್ಳಿ ತಾಲ್ಲೂಕಿನ ಹಿಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ ಗ್ರಾಮ ದ ವಿಜಯಕುಮಾರ(38) ಮೃತಪಟ್ಟ ರೈತ . ಮೃತನತಂದೆ ಹೆಸರಿನಲ್ಲಿದ್ದ 2 ಎಕರೆ ಜಮೀನು ನಲ್ಲಿ ವ್ಯವಸಾಯ ಮಾಡುತ್ತಿದ್ದ ಎನ್ನಲಾಗಿದೆ ಬ್ಯಾಂಕ್ ಹಾಗೂ ಕೈ ಸಾಲ ಸೇರಿದಂತೆ 6 ಲಕ್ಷ ರೂ ಸಾಲ ಮಾಡಿದ್ದರು ಎನ್ನಲಾಗಿದೆ. . ಸ್ಥಳಕ್ಕೆ ಕೃಷಿ ಅಧಿಕಾರಿ ರಮೇಶ. ತಾ.ಪಂ ಇಒ ಬಾಬು.ಬೇಟಿ ನೀಡಿ.ಪರಿಶೀಲನೆ. ನಡೆಸಿದರು. ಮೃತನಿಗೆ ಪತ್ಮಿ ಸೇರಿದಂತೆ ಮೂರುತಿಂಗಳ ಗಂಡುಮಗು. ಹಾಗೂ ನಾಲ್ಕು ವರ್ಷದ ಹೆಣ್ಣು ಮಗುವಿದೆ. ತಾ.ಪಂ ಸದಸ್ಯ ಪುಟ್ಟಸ್ವಾಮಿ ರವರ ಸಹೋದರ ಎಂದು ತಿಳಿದುಬಂದಿದೆ. ಮಾಜಿಶಾಸಕ‌ .ಡಾ.ಕೆ ಅನ್ನದಾನಿ.ಪುರಸಭೆ ಸದಸ್ಯ ಚಿಕ್ಕರಾಜು ತಾ.ಪಂ ಸದಸ್ಯ‌ಮುತ್ತುರಾಜು, ಬೇಟಿನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.