ಕುಡಿಯುವ ನೀರಿನ ಘಟಕದ ಉದ್ಘಾಟನೆ..

367

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲೂಕಿನ ಕೈವಾರ‌ ಪಂಚಾಯಿತಿ ವ್ಯಾಪ್ತಿಯಲ್ಲಿರುವ‌ ಚಾಮರಾಜಹೊಸ ಪೇಟೆ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಮತ್ತು ನಿತಿ ಆಯೋಗ ಯೋಜನೆಯಡಿಯಲ್ಲಿ 2017 -18 ನೇ ಸಾಲಿನಲ್ಲಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಶುಧ್ಧ ಕುಡಿಯುವ ನೀರಿನ ಘಟಕ ಮತ್ತು ಗ್ರಾಮ ಪಂಚಾಯಿತಿಯ 14 ನೇ ಹಣಕಾಸಿನ ಯೋಜನೆಯಡಿಯಲ್ಲಿ 2 ಲಕ್ಷ ರೂಪಾಯಿ ವೆಚ್ಚ ದಲ್ಲಿ ಸಿಸಿ ರಸ್ತೆ ಕಾಮಗಾರಿ ಶಾಸಕ ಜೆಕೆ ಕೃಷ್ಣಾ ರೆಡ್ಡಿ ರವರು ನೆರವೇರಿಸಿ ಮಾತನಾಡಿದ ಅವರು ಈ ಗ್ರಾಮದ ಜನರಿಗೆ ಕುಡಿಯುವ ನೀರು 2 ರೂಪಾಯಿ ಗೆ 20 ಲೀಟರ್ ನೀರು ಕೋಡಲಾಗುತ್ತದೆ ಎಂದರು.

ಗ್ರಾಮದ ಎಲ್ಲರಿಗೂ ಕಾರ್ಡ್ ಗಳು ವಿತರಣೆ ಮಾಡಬೇಕು ಮತ್ತು ಒಂದು ನೀರಿನ ಬಿಂದಿಗಿ ಮತ್ತು ಒಂದು ಕ್ಯಾನ್ ದರವನ್ನು ಬೋರ್ಡ್ ಹಾಕಬೆಕೇಂದು ಘಟಕದವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ತಾ ಪಂ ಸದಸ್ಯರಾದ ನಾರಾಯಣ್ ಸ್ವಾಮಿ,ಕೈವಾರ ಗ್ರಾಮ ಪಂ ಅಧ್ಯಕ್ಷೆ ಶೈಲಜಾ ಮಂಜುನಾಥ, ಬನಹಳ್ಳಿ ರವಿ , ಎಪಿಎಂಸಿ ಮಾಜಿ ಸದಸ್ಯರಾದ ಸುಬ್ಬರೆಡ್ಡಿ
,ಪೆದ್ದೂರ ನಾಗರಾಜ್ ರೆಡ್ಡಿ, ಪಿ ಡಿ ಓ ರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.