ರಾಷ್ಟ್ರೀಯ ಪಕ್ಷಗಳ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯ

266

ಬೆಂಗಳೂರು (ಕೃಷ್ಣರಾಜಪುರ): ರಾಷ್ಟ್ರೀಯ ಪಕ್ಷಗಳ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಪ್ರಾದೇಶಿಕ ಪಕ್ಷಗಳತ್ತ ಜನ ಒಲವು ತೋರುತ್ತಿದ್ದಾರೆಂದು ಕೆಆರ್‍ಪುರ ಕ್ಷೇತ್ರದ ಜೆಡಿಎಸ್ ಪಕ್ಷದ ಮುಖಂಡ ಶಂಕರ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಹೊರಮಾವು ಜಂಕ್ಷನ್ ಬಳಿ ಜೆಡಿಎಸ್ ಕಾರ್ಯಕರ್ತರು ಆಯೋಜಿಸಿದ್ದ ಪಕ್ಷದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು ಕೇಂದ್ರ ಮತ್ತು ರಾಜ್ಯಗಳಲ್ಲಿ ನಡೆಸಿದ ಆಡಳಿತ ಭ್ರಷ್ಟ ಮತ್ತು ಹಗರಣಗಳ ಸರಮಾಲೆಯಲ್ಲಿ ತೊಡಗಿ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ.

ಪ್ರಾದೇಶಿಕ ಪಕ್ಷಗಳು ದೇಶದ ವಿವಿಧ ರಾಜ್ಯಗಳಲ್ಲಿ ಜನರ ಒಲವಿಗೆ ಪಾತ್ರವಾಗಿದೆ, ತಮ್ಮ ಅಭಿವೃದ್ಧಿ ಪಥದ ಆಶಳ್ವಿಕೆಗೆ ಜನರ ವಿಶ್ವಾಸಗಳಿಸುತ್ತಿದೆ, ರಾಜ್ಯದಲ್ಲಿ ಜೆಡಿಎಸ್ ಆಡಳಿತಾವದಿಯಲ್ಲಿ ಮಾಡಿದ ಅಭಿವೃದ್ಧಿ ಜನ ಮಾನಸದಲ್ಲಿ ಮಾಸದೆ ಉಳಿದಿದೆ, ರಾಷ್ಟ್ರೀಯ ಪಕ್ಷಗಳು ಜನರಿಗೆ ನೀಡಿದ ಆಶ್ವಾಸನೆ ಈಡೇರಿಸದೆ ಕಚ್ಚಾಡುತ್ತಿವೆಯೇ ಹೊರತು ಅಭಿವೃದ್ಧಿ ಅಸಾಧ್ಯವಾಗಿದೆ, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಆಡಳಿತ ಚುಕ್ಕಾಣಿ ಹಿಡಿಯಲಿದೆ ರಾಜ್ಯಧ್ಯಕ್ಷ ಕುಮಾರಸ್ವಾಮಿಯವರನ್ನು ಅಧಿಕಾರಕ್ಕೆ ಖಚಿತವಾಗಿ ಬರುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ಆದೇ ರೀತಿ ಕೆಆರ್‍ಪುರ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಲು ಕಾರ್ಯಕರ್ತರು ಇಂದಿನಿಂದಲೇ ಶ್ರಮವಹಿಸಬೇಕೆಂದು ಕರೆ ನೀಡಿದರು. ಸಂಘಟನೆ ಬಲವರ್ದನೆಗೊಳಿಸಲು ಕಾರ್ಯಕರ್ತರು ಮುಖಂಡರು ಕ್ಷೇತ್ರಾದ್ಯಂತ ಜೆಡಿಎಸ್ ಆಡಳಿತಾವದಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವಂತೆ ಮಾಡಬೇಕೆಂದು ಹೇಳಿದರು. ಕ್ಷೇತ್ರಾಧ್ಯಕ್ಷ ಪ್ರಕಾಶ್ ರೆಡ್ಡಿ ಮಾತನಾಡಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಕಾರ್ಯರ್ತರನ್ನು ಹುರಿದುಂಬಿಸಿದರು, ಅಲ್ಲದೆ ಆಡಳಿತಾ ರೂಡ ಪಕ್ಷದ ಹುಳುಕುಗಳನ್ನು ಜನತೆಗೆ ತಿಳಿಸುತ್ತೇವೆಂದು ಸವಾಲೊಡ್ಡಿದರು. ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ಪಕ್ಷದ ಚೌಕಟ್ಟಿನಲ್ಲಿಯೇ ಬಗೆಹರಿಸಿಕೊಂಡು ಒಗ್ಗಟ್ಟಿನ ನಿಯಮ ಪಾಲಿಸಬೇಕೆಂದರು. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕೆಆರ್‍ಪುರ ಕ್ಷೇತ್ರದಿಂದ ಸ್ಪರ್ಧಿಸಲು ಶಂಕರ್ ರೆಡ್ಡಿಯವರನ್ನು ಕಾರ್ಯಕರ್ತರು ಗುರುತಿಸಿದ್ದಾರೆ, ಪಕ್ಷದ ಹೈಕಮೆಂಡ್ ಇವರಿಗೆ ಟಿಕೆಟ್ ನೀಡಿ ಪಕ್ಷಕ್ಕೆ ಶ್ರಮಿಸಲು ಉತ್ಸಾಹ ತುಂಬಬೇಕೆಂದರು. ಈ ಸಂದರ್ಬದಲ್ಲಿ ತಾಯಾನ್ ರೆಡ್ಡಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಮೇಡಹಳ್ಳಿ ನಾಗರಾಜು, ಮುನಿವೆಂಕಟಪ್ಪ, ಹನುಮಂತು, ಸುರೇಶ್, ಶರ್ಮಾ, ಪ್ರಕಶ್ ಸೋಮ್ ಶೇಖರ್