ಪ್ರಗತಿ ಉತ್ಸವ ಕಾರ್ಯಕ್ರಮ.

250

ಬೆಂಗಳೂರು/ಮಹದೇವಪುರ:ಖಾಸಗಿ ಶಾಲೆಗಳು ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮಾಜಿ ಸಚಿವ, ಸ್ಥಳೀಯ ಶಾಸಕ ಅರವಿಂದ್ ಲಿಂಬಾವಳಿ ತಿಳಿಸಿದರು.ಕ್ಷೇತ್ರದ ಕಾಡುಗುಡಿ ಪ್ರಗತಿ ಶಾಲೆ, ಪಿ.ಯು ಕಾಲೇಜ್‌ನಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಉತ್ಸವ ೧೮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಮನೆಗೊಂದು ಮಗು ವಿದ್ಯೆ ಕಲಿತರೆ ನಾಡೇ ವಿದ್ಯೆ ಕಲಿತಂತೆ, ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ವಿದ್ಯೆ ಕಲಿಸಬೇಕು ಎಂದು ತಿಳಿಸಿದರು.ಬಡಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ,

ಕಡಿಮೇ ಶುಲ್ಕ ತೆಗೆದುಕೊಂಡು ವಿದ್ಯೆ ನೀಡುವ ಕೆಲಸ ಖಾಸಗಿ ಶಾಲೆಗಳು ಮಾಡಬೇಕು ಎಂದರು.
ಶಾಲೆಯಲ್ಲಿ ನೀಡುವ ವಿದ್ಯೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಹೇಳಿದರು.
ವಿದ್ಯೆ ಮಾತ್ರವಲ್ಲದೆ ಮಕ್ಕಳು ಎಲ್ಲಾ ರಂಗಗಳಲ್ಲೂ ಭಾಗವಹಿಸಿ ತಮ್ಮ ಪ್ರತಿಭೆ ತೋರಿಸಲು ಶಾಲಾ ಉಪಾಧ್ಯಾಯರು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.ಪ್ರಗತಿ ಶಾಲೆ ಇತರ ಖಾಸಗಿ ಶಾಲೆಗಳಿಗೆ ಮಾದರಿಯಾಗಿ ವಿದ್ಯೆ ನೀಡುವುದರ ಜೊತಗೆ, ಕಡುಬಡ ಮಕ್ಕಳಿಗೆ ಉಚಿತವಾಗಿ ವಿದ್ಯೆಯನ್ನು ನಿಡಿತ್ತಿರುವ ಶಾಲೆಯ ಅಧ್ಯಕ್ಷ ಸೋಂ ಸಿಂಗ್ ಅವರಿಗೆ ಅಭಿನಂದನೆಗಳು ತಿಳಿಸಿದರು.ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನ ಸೆಳೆಯಿತು.ಈ ಸಂದರ್ಭದಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ, ಸ್ಕಿಲ್ ಡೆವಲಪ್ಮೆಂಟ್ ಅಕುಲ್, ಗೋಪಾಲ ಕೃಷ್ಣ, ಬಿಜೆಪಿ ಮುಖಂಡರು ಅಸ್ಲಂ ಪಾಷಾ, ಅಶ್ವತ್ಥ ಮುಂತಾದವರು ಹಾಜರಿದ್ದರು.