ಮಂಡಲಪೂಜೆ ಮಹೋತ್ಸವ..

337

ಬೆಂಗಳೂರು:ಮಂಡಲಪೂಜೆ ಮಹೋತ್ಸವದ ಅಂಗವಾಗಿ ಕೆ.ಆರ್.ಪುರ ಸಮೀಪದ ಬೈಯಪ್ಪನಹಳ್ಳಿಯ ಬಿ.ಎಂ.ಕೃಷ್ಣಮೂರ್ತಿನಗರದಲ್ಲಿ ಅಯ್ಯಪ್ಪಸ್ವಾಮಿಗೆ ವಿಶೇಷ ಮಕರಜ್ಯೋತಿ ಪೂಜೆ ಸಲ್ಲಿಸಲಾಯಿತು.ಗುರುಸ್ವಾಮಿ ಮನೆಯಿಂದ ಅಯ್ಯಪ್ಪಸ್ವಾಮಿ ದೇವರಿಗೆ ವಿಶೇಷ ಅಲಂಕಾರ ಮಾಡಲು ಭಕ್ತರು ಆಭರಣವನ್ನು ತಲೆಯಮೆಲೆತ್ತುಕೊಂಡು ತಿರುವಾಭರಣ ಮೆರವಣಿಗೆಯನ್ನು ಮಾಡಿದರು. ಪ್ರಮುಖ ಬೀದಿಗಳಲ್ಲಿ ದೇವರ ಆರಾಧನೆಯ ಭಜನೆಯೊಂದಿಗೆ ಸಾಗಿದ ಮೆರೆವಣಿಗೆ ಬೀದಿಗಳಲ್ಲಿ ಪೂಜೆ ಸಲ್ಲಿಸಿ ಧನ್ಯರಾದರು. ನಂತರ ಅಭರಣವನ್ನು ದೇವರಿಗೆ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು. ನಾನಾ ಭಾಗಗಳ ಗ್ರಾಮಗಳಿಂದ ಆಗಮಿಸಿದ ನೂರಾರು ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು.

ಕಳೆದ ಏಳು ದಿನಗಳಿಂದ ಮಹಾಗಣಪತಿ ಹೋಮ, ತುಪ್ಪದ ಅಭಿಷೇಕ, ವೈಕುಂಠ ಏಕಾದಶಿ ವಿಶೇಷ ಪೂಜೆ, ಪರೆಯಡಪು, ಪೂಜೆ, ದೀಪ ಪೂಜೆ, ಮಹಾಗಣಪತಿ ಹೋಮ ಕಾರ್ಯಕ್ರಮಗಳು ನಡೆಸಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಿ.ಕೆ. ಮನಮೋಹನ್ ತಿಳಿಸಿದರು.ಮಕರಜ್ಯೋತಿ ಮಹೋತ್ಸವದ ಅಂಗವಾಗಿ ಅಯ್ಯಪ್ಪಸ್ವಾಮಿಯ ಅಭರಣವನ್ನು ಮೆರವಣಿಗೆ ಮೂಲಕ ಹೊತ್ತು ತರಲಾಯಿತು.