ಹಸುಗಳಿಗೆ ಮೇವು ಮತ್ತು ಫೀಡು ವಿತರಣೆ..

215

ಬೆಂಗಳೂರು:ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರ ಪ್ರದೇಶದಲ್ಲಿ ಸಾಕಲಾಗುತ್ತಿರುವ ಹಸುಗಳಿಗೆ ಮೇವು ಮತ್ತು ಪೀಡು ವಿತರಣೆ ಮಾಡುವ ಮೂಲಕ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಲಾಗುವುದೆಂದು ಕರ್ನಾಟಕ ರಿಪಬ್ಲಿಕನ್ ಸೇನೆ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಕನ್ನಳ್ಳಿ ಕೃಷ್ಣಪ್ಪ ತಿಳಿಸಿದರು.

ಇಲ್ಲಿನ ವಿಧಾನ ಸಭಾ ಕ್ಷೇತ್ರದಲ್ಲಿ ಕರ್ನಾಟಕ ರಿಪಬ್ಲಿಕನ್ ಸೇನೆಯ ಆಟೋ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಭಾಗದ ಸುಮಾರು 80 ರಿಂದ 100 ಹಸುಗಳಿಗೆ ಮೇವು ಮತ್ತು ಪೀಡು ವಿತರಣೆ ಮಾಡಿ ಅವರು ಮಾತನಾಡಿದರು. ನಗರಗಳಲ್ಲಿ ನಿಷ್ಠಾವಂತರಾಗಿ ಜನರ ಸೇವೆಯನ್ನು
ಮಾಡುತ್ತಿರುವವರೆ ಆಟೋ ಡೈವರ್ಸ್ ಎಂದರು. ಸರ್ಕಾರ ವತಿಯಿಂದ ಪೊಲೀಸರಿಗೆ ಹಾಗೂ ಸೈನಿಕರಿಗೆ ಕ್ವಾಟರಸ್ ನೀಡಲಾಗಿದೆ ಎಂದರು. ಆದರೆ ಆಟೋ ಡೈವರ್ಗಳು ವಾಸ ಮಾಡಲು ಸ್ವಂತ ನಿವೇಶನವಿಲ್ಲ ಎಂದರು. 2004 ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಗಳಾಗಿದ್ದಾಗ ಆಟೋ ಡ್ರೈವರ್ ಗಳಿಗೆ ನಿವೇಶನ ನೀಡುವ ಬರವಸೆ ನೀಡಿದ್ದರು ಆದರೆ ಅವರ ಅಧಿಕಾರ ಅವಧಿ ಮುಗಿದ ನಂತರ ಅದರ ವಿಚಾರ ಸತ್ತು ಹೋಯಿತು ಎಂದರು. ಕರ್ನಾಟಕ ರಿಪಬ್ಲಿಕನ್ ಸೇನೆ ರಾಷ್ಟ್ರೀಯ ಅಧ್ಯಕ್ಷರಾದ ಆನಂದರಾಜ್ ಅಂಬೇಡ್ಕರ್ರವರು ಮುನ್ನಡೆಸುತ್ತಿರುವ ಸಂಘಟನೆ ಇದಾಗಿದೆ ಎಂದರು. ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ ಶ್ರಮ ವಹಿಸಿ ದಲಿತ ರಥ ತಳಮಟ್ಟ  ದಿಂದ ಎಳೆದುತಂದು ದಡದಲ್ಲಿ ಬಿಟ್ಟಿರುತ್ತಾರೆ ಅದನ್ನು ನಾವು ಮುಂದಕ್ಕೆ ಎಳೆಯೋಣ ಎಂದರು. ಇಂದಿನ ರಾಜಕೀಯ ವ್ಯೆವಸ್ಥೆಯಲ್ಲಿ ದಲಿತರು ತಮ್ಮ ಸೌಲಭ್ಯ ಪಡೆಯುವುದು ಕಷ್ಟದ ಸಂಗತಿಯಾಗಿದೆ ಎಂದರು. ಕರ್ನಾಟಕ ರಿಪಬ್ಲಿಕನ್ ಸೇನೆ ವತಿಯಿಂದ ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳಿಗೆ ಹಾಕಲಾಗುವುದೆಂದು ಸಂಘದ ರಾಜ್ಯಾಧ್ಯಕ್ಷರಾದ ಜಿಗಣಿ ಶಂಕರ್ ತಿಳಿಸಿದ್ದರೆ ಆ ನಿಟ್ಟಿನಲ್ಲಿ ಎಲ್ಲ ವಿಧಾನ ಸಭಾ ಕ್ಷೇತ್ರಗಳಿಗೆ ಅಭ್ಯಥಿಗಳನ್ನು ಆರಿಸಲಾಗುವುದೆಂದರು. ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೆ ಮತದಾನದ ಹಕ್ಕನ್ನು ಕೊಟ್ಟವರು ಡಾ|| ಬಿ.ಆರ್.ಅಂಬೇಡ್ಕರ್ ಎಂದರು. ಮುಂದಿನ ದಿನಗಳಲ್ಲಿ ಕರ್ನಾಟಕ ರಿಪಬ್ಲಿಕನ್
ಸೇನೆ ವತಿಯಿಂದ ಬಡ ದಲಿತ ಜನರಿಗೆ ಸ್ವಂತ ನಿವೇಶನ ಕೊಡಿಸುವ ನಿಟ್ಟಿನಲ್ಲಿ ಸರ್ಕಾರದ ವಿರುದ್ದ ಹೋರಾಟ ನಡೆಸಲಾಗುವುದೆಂದು ಅವರು ತಿಳಿಸಿದರು.
ಈ ಸಂದರ್ಬದಲ್ಲಿ ನಗರ ಜಿಲ್ಲಾ ಆಟೋ ಘಟಕದ   ಅಧ್ಯಕ್ಷ ಬಾಬು, ಉಪಾಧ್ಯಕ್ಷ ಬಿ.ಜಯರಾಂ, ಪದಾಧಿಕಾರಿಗಳಾದ ಧರ್ಮ, ಮನೋಜ್, ಸಾಲಮನ್, ದೂಮ್ಮಲೂರು ಕೃಷ್ಣಪ್ಪ ಮುಂತಾದವರು ಹಾಜರಿದ್ದರು.