ಗಣರಾಜ್ಯೋತ್ಸವ ದಿನಾಚರಣೆ..

505

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣ ಮೈದಾನ ದಲ್ಲಿ 69ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಸಮಾರಂಭ ವನ್ನು,ಚಿಕ್ಕಬಳ್ಳಾಪುರ ಜಿಲ್ಲಾ ಉಪವಿಭಾಗ ಅಧಿಕಾರಿ ಶಿವ ಸ್ವಾಮಿ ಹಾಗೂ ಮಾನ್ಯ ಶಾಸಕರದ ಜೆ ಕೆ ಕೃಷ್ಣಾ ರೆಡ್ಡಿ ರವರು ನೆರವೇರಿಸಿದರು.

ನಗರದ ಝಾನ್ಸಿ ರಾಣಿ ಕ್ರೀಡಾಂಗಣದಲ್ಲಿ ಶುಕ್ರವಾರ ತಾಲ್ಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ನಗರಸಭೆ ಜಂಟಿಯಾಗಿ ಏರ್ಪಡಿಸಿದ್ದ 69ನೇ ಗಣರಾಜ್ಯೋತ್ಸವ ದಿನದೆಂದು ಅಧ್ಯಕ್ಷತೆ ವಹಿಸಿ ಮಾನ್ಯ ಶಾಸಕರು ಜೆ.ಕೆ ಕೃಷ್ಣಾ ರೆಡ್ಡಿ ಮಾತನಾಡುತ್ತಿದ್ದರು.
ನಗರದ ಝಾನ್ಸಿರಾಣಿ ಕ್ರೀಡಾಂಗಣದಲ್ಲಿ ನಡೆದ 69 ನೇ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ನಗರದ ಠಾಣೆ ಸಬ್ ಇನ್ಸ್ ಪೆಕ್ಟರ್ ನಾರಾಯಣಸ್ವಾಮಿ ಹಾಗೂ ಅವರ ತಂಡ,ಗೃಹ ರಕ್ಷಕ ದಳ ಸಿಬ್ಬಂದಿ, ನಗರದ ಬಾಲಕರ ಹಾಗೂ ಮಹಿಳಾ ಕಾಲೇಜಿನ ಎನ್ ಸಿಸಿ ತಂಡಗಳು ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಶಿಸ್ತು ಬದ್ಧ ವಾಗಿ ನಡೆಸಿಕೊಟ್ಟ ಆಕರ್ಷಕ ಪಂಥ ಸಂಚಲನ ಎಲ್ಲರ ಗಮನ ಸೆಳೆಯಿತು.
ಈ ವೇಳೆ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ವಾಣಿ ಕೃಷ್ಣಾ ರೆಡ್ಡಿ ,ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಶಾಂತಮ್ಮ ವರದರಾಜು ,ನಗರಸಭೆ ಅಧ್ಯಕ್ಷೆ ಸುಜಾತ ಶಿವಣ್ಣ , ಕ್ಷೇತ್ರ ಶಿಕ್ಷಣಾಧಿಕಾರಿ ಮೊಹಮ್ಮದ್ ಖಲೀಲ್ ,ನಗರಸಭೆ ಆಯುಕ್ತರು ನಾಗೇಂದ್ರ ಬಾಬು , ತಾಲ್ಲೂಕಿನ ಉಪವಿಭಾಗದ ಅಧಿಕಾರಿ ಡಿವೈಎಸ್ಪಿ ನಾಗೇಶ್, ಇನ್ನೂ ಮುಂತಾದವರು ಉಪಸ್ಥಿತಿಯಿದರು.