ವಸತಿಹೀನರಿಗೆ ನಿವೇಶನಾ ನೀಡವುದಕ್ಕೆ ತಹಶೀಲ್ದಾರ್ ಒಪ್ಪಿಗೆ.

247

ಬೆಂಗಳೂರು/ಕೆ.ಆರ್.ಪುರ;- ಬಿದರಹಳ್ಳಿ ಸರ್ವೇ ನಂ 193 ರಲ್ಲಿ ಮಂಜೂರಾಗಿರುವ 22 ಎಕರೆ ಜಾಗದಲ್ಲಿ ಕರ್ನಾಟಕ ಜನಾಂದೋಲನಾ ಸಂಘಟನೆಯ ವತಿಯಿಂದ ನೀಡಿರುವ ಮನವಿಯಂತೆ ವಸತಿಹೀನರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ತಾಹಶೀಲ್ದಾರ್ ತಿಳಿಸಿದರು.

ಇಲ್ಲಿನ ತಾಲ್ಲೂಕು ಕಛೇರಿಯಲ್ಲಿ ಬಿದರಹಳ್ಳಿ ಭಾಗದ ವಸತಿಹೀನರಿಗೆ ನಿವೇಶನ ನೀಡುವ ವಿಚಾರದಲ್ಲಿ ಕರ್ನಾಟಕ ಜನಾಂದೋಲನ ಸಂಘಟನೆಯ ಮುಖಂಡರನ್ನು ಸಭೆ ಕರೆದು ಮಾತನಾಡಿದರು. ಮನವಿಯಂತೆ ಬಿದರಹಳ್ಳಿ ಭಾಗದ ಜನರಿಗೆ ನಿವೇಶನ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
94 ಸಿ.ಸಿ,ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಪಲಾನುಭವಿಗಳಿಗೆ
ಸರ್ಕಾರದ ಅದೇಶಾನ್ವಯ ನಿವೇಶನ ನೀಡುವ ಬರವಸೆಯನ್ನು ನೀಡಿದರು.
ಇದೆ ತಿಂಗಳು ಪ್ರತಭಟನೆ ನಡೆಸಿ ಮನವಿ ನೀಡಿರುವ ಪ್ರಕಾರ ಬಿದರಹಳ್ಳಿ ಸರ್ವೇ ನಂ 193 ರಲ್ಲಿ ಜಾಗ ಈಗಾಗಲೆ ಮಂಜೂರಾತಿಯಾಗಿದ್ದು ಮುಂದಿನ ಕ್ರಮ ಕೈಗೊಂಡು ಸರ್ಕಾರದ ಆದೇಶ ಬಂದ ಕೂಡಲೆ ನಿವೇಶನ ಹಂಚಿಕೆ ಮಾಡಲಾಗುವುದೆಂದು ಅವರು ತಿಳಿಸಿದರು.
ಕರ್ನಾಟಕ ಜನಾಂದೋಲನ ಸಂಘಟನೆಯ ರಾಜ್ಯಾದ್ಯಕ್ಷ ಕೆ.ಮರಿಯಪ್ಪ ಮಾತನಾಡಿ ಬಿದರಹಳ್ಳಿಯ ಸರ್ವೇ ನಂ 193 ರಲ್ಲಿ ಈಗಾಗಲೆ ಮಂಜೂರಾಗಿರುವ 22 ಎಕರೆ ಜಮೀನಿನಲ್ಲಿ ಎರಡು ಎಕರೆ ಸ್ಲಂ ಬೋರ್ಡ್ ಗಳು ನೀಡಲಾಗಿದ್ದು ಉಳಿದ 20 ಎಕರೆ ಜಾಗವನ್ನು ರಾಜೀವ್ಗಾಂಧಿ ವಸತಿ ನಿಗಮಕ್ಕೆ ನೀಡಲಾಗಿದ್ದು ಬಡವರಿಗೆ ನೀವೇಶನ ನೀಡಲು ಸೂಚಿಸಲಾಗಿತ್ತು. ಆದರೆ ರಾಜಿವ್ಗಾಂಧಿ ವಸತಿನಿಗಮದಿಂದ ವಸತಿ ನೀಡುವುದು ತಡವಾಗಿರುವುದರಿಂದ ಸದರಿ ಜಾಗವನ್ನು ಮರು ಮಂಜೂರಿ ಮಾಡಿ ನೇರವಾಗಿ ಬಿದರಹಳ್ಳಿ ಗ್ರಾಮಸ್ತರಿಗೆ ಅನುಕೂಲವಾಗುವಂತೆ ಮಂಜೂರು ಮಾಡಲು ತಹಶೀಲ್ದಾರ್ರವರಿಗೆ ಮನವಿ ಸಲ್ಲಿಸಿರಲಾಗುವುದು ಎಂದರು. ಬೆಂಗಳೂರು ಪೂರ್ವ ತಾಲ್ಲುಕಿನಲ್ಲಿ ಸುಮಾರು ಬಡಜನರು
ಗುಡಿಸಿಲುಗಳಲ್ಲಿ ವಾಸವಾಗಿದ್ದು ಅವರಿಗೆ ಸರ್ಕಾರಿ ಜಾಗ ಗೊತ್ತುಪಡಿಸಿ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್ಗೆ ಮನವಿ ಮಾಡಿದರು. ತಾಹಶೀಲ್ದಾರ್ ಕರೆದಿದ್ದ ಮಾತು ಕತೆಯಲ್ಲಿ ಬಿದರಹಳ್ಳಿ ಭಾಗದ ಬಡ ಜನರು ಭಾಗವಹಿಸಿದ್ದರು.
ಸಭೆಯಲ್ಲಿ ನೀಡಲಾಗಿರುವ ಬಿದರಹಳ್ಳಿ ಸರ್ವೇ ನಂ 193 ಮರು  ಮಂಜೂರಾತಿ ವಿಚಾರದಲ್ಲಿ ಮನವಿಯನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದೆಂದು ತಾಹಶೀಲ್ದಾರ್ ತಿಳಿಸಿದರು.
ಈ ಸಂದರ್ಬದಲ್ಲಿ ರಾಜ್ಯ ಚಳುವಳಿ ಒಕ್ಕೂಟಗಳ ರಾಜ್ಯಾಧ್ಯಕ್ಷ ರಾಜಣ್ನ,
ಮುಖಂಡರಾದ ದೊಡ್ಡೆಲ್ಲಪ್ಪ, ಕೆಜೆಎಸ್ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಸ್.ಡಿ.ಗುಣಶೇಖರ್, ಬಿದರಹಳ್ಳಿ ಗ್ರಾಮಸ್ತರಾದ ವೆಂಕಟೇಶ್, ರಾಮಸ್ವಾಮಿ, ಶಿವಪ್ಪ, ಭಾಸ್ಕರ್, ಆಂಜಿನಪ್ಪ, ವರಲಕ್ಷ್ಮೀ, ಚಿನ್ನಮ್ಮ, ಮುನಿಯಪ್ಪ, ಖಾಜಿಸಾಬ್, ಸುಮಾ, ನಾಗಮಣಿ, ಬಾಲಪ್ಪ ಮುಂತಾದವರು ಹಾಜರಿದ್ದರು.